Sunday, April 28, 2024
Homeಕ್ರೀಡೆಸೆಪ್ಟೆಂಬರ್ 19ರಿಂದ ಐಪಿಎಲ್ ಪುನರಾರಂಭ? ಎಲ್ಲಿ ಗೊತ್ತಾ?

ಸೆಪ್ಟೆಂಬರ್ 19ರಿಂದ ಐಪಿಎಲ್ ಪುನರಾರಂಭ? ಎಲ್ಲಿ ಗೊತ್ತಾ?

spot_img
- Advertisement -
- Advertisement -

ಮುಂಬೈ: ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿರುವ ಐಪಿಎಲ್ 14ನೇ ಆವೃತ್ತಿಯ ಬಾಕಿ ಉಳಿದಿರುವ 31 ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಸೆಪ್ಟೆಂಬರ್ 15 ರಿಂದ ಐಪಿಎಲ್ ಭಾಗ-2 ಯುಎಇನಲ್ಲಿ ನಡೆಯುವ ಸಾಧ್ಯತೆ ಇದೆ.

ಉಳಿದ ಐಪಿಎಲ್ ಪಂದ್ಯಗಳನ್ನು ದುಬೈಗೆ ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿದೆ. ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 10 ರವರೆಗೆ ಪಂದ್ಯಾವಳಿ ನಡೆಯಲಿದೆ ಎನ್ನಲಾಗಿದೆ. ಭಾರತದಲ್ಲಿ ಕೊರೋನಾ ಎರಡನೆಯ ಕಾರಣದಿಂದಾಗಿ ಟೂರ್ನಿ ಸ್ಥಗಿತಗೊಳಿಸಲಾಗಿತ್ತು. ಕ್ರಿಕೆಟಿಗರಿಗೆ ಕೊರೋನಾ ಸೋಂಕು ತಗಲಿದ ಹಿನ್ನೆಲೆಯಲ್ಲಿ ಟೂರ್ನಿ ಸ್ಥಗಿತಗೊಳಿಸಿದ್ದು, ಪ್ರಸಕ್ತ ಟೂರ್ನಿಯ ಉಳಿದ ಪಂದ್ಯಗಳನ್ನು ದುಬೈಗೆ ಸ್ಥಳಾಂತರ ಮಾಡಲಾಗಿದೆ.

ಸೆಪ್ಟೆಂಬರ್ 18 ಶನಿವಾರ ಹಾಗೂ 19ನೇ ತಾರೀಖು ಭಾನುವಾರ ಆಗಿರುವುದು ಪಂದ್ಯಗಳನ್ನು ಪುನಾರಂಭಿಸಲು ಅತ್ಯಂತ ಸೂಕ್ತ ದಿನವೆಂದು ಬಿಸಿಸಿಐ ನಿರ್ಧರಿಸಿದೆ. ಹೀಗಾಗಿ ಮೇ 4ರಂದು ಏಕಾಏಕಿ ನಿಂತಿದ್ದ ಪಂದ್ಯ ಈಗ ಮತ್ತೆ ಆರಂಭಗೊಳ್ಳುವುದು ಖಚಿತವಾಗಿದೆ. ಉಳಿದ 31 ಪಂದ್ಯಗಳನ್ನು ಆಡಿಸಬೇಕೆಂದರೂ ಮೂರು ವಾರಗಳ ಕಾಲ ಆರಾಮವಾಗಿ ಸಾಕು ಎಂದು ಅಭಿಪ್ರಾಯಪಟ್ಟಿರುವ ಬಿಸಿಸಿಐ ಈ ಬಾರಿಯ ಸರಣಿಗೆ ಸೂಕ್ತ ಅಂತ್ಯ ನೀಡಲೇಬೇಕೆಂಬ ಕಾರಣಕ್ಕೆ ಈ ನಿಲುವು ತಾಳಿರುವುದಾಗಿ ತಿಳಿಸಿದೆ.

ಬಾಕಿ ಸರಣಿಯಲ್ಲಿ 10 ಮುಖಾಮುಖಿ ಪಂದ್ಯಗಳು (ಒಟ್ಟು 20 ಪಂದ್ಯ), ಏಳು ಸಂಜೆ ಅವಧಿಯ ಪಂದ್ಯಗಳು, 2 ಕ್ವಾಲಿಫೈಯರ್, ಒಂದು ಎಲಿಮಿನೇಟರ್ ಹಾಗೂ ಒಂದು ಅಂತಿಮ ಪಂದ್ಯ ಸೇರಿ ಒಟ್ಟು 31 ಪಂದ್ಯ ಇರಲಿದೆ ಎಂದು ಬಿಸಿಸಿಐ ಈಗ ನೀಡಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಮ್ಯಾಚ್ ಸೆಪ್ಟೆಂಬರ್ 14ರಂದು ಅಂತ್ಯಗೊಳ್ಳಲಿದ್ದು ಅಲ್ಲಿಂದ ಭಾರತೀಯ ಆಟಗಾರರೆಲ್ಲರೂ ಅತ್ಯಂತ ಸುರಕ್ಷಿತ ರೀತಿಯಲ್ಲಿ ದುಬೈ ತಲುಪಲಿದ್ದಾರೆ. ಹಾಗೆಯೇ ಉಳಿದ ಆಟಗಾರರನ್ನೂ ಕರೆತರಲಾಗುವುದು ಎಂದು ಆಯೋಜಕರು ಹೇಳಿದ್ದಾರೆ. ಭಾರತದಲ್ಲಿ ಬಯೋ ಬಬ್ಬಲ್​ ಇದ್ದಾಗಿಯೂ ಉಂಟಾಗಿದ್ದ ಸಮಸ್ಯೆಗಳು ಮತ್ತೆ ತಲೆದೋರದಂತೆ ನೋಡಿಕೊಳ್ಳುವುದಾಗಿಯೂ ಇದೇ ವೇಳೆ ಭರವಸೆ ನೀಡಲಾಗಿದೆ.

- Advertisement -
spot_img

Latest News

error: Content is protected !!