Saturday, June 6, 2026
Homeಕರಾವಳಿಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ :ಮಂಗಳೂರಿನಲ್ಲಿ ವ್ಯಕ್ತಿಯ...

ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ :ಮಂಗಳೂರಿನಲ್ಲಿ ವ್ಯಕ್ತಿಯ ವಿರುದ್ಧ ದೂರು ದಾಖಲು

- Advertisement -
- Advertisement -

ಮಂಗಳೂರು: ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿರುವ ವ್ಯಕ್ತಿಯೊಬ್ಬರ ವಿರುದ್ದ ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಶೀದ್ ಟಿಪ್ಪು ಎಂಬ ಹೆಸರಿ ಫೇಸ್ ಬುಕ್ ಖಾತೆಯಲ್ಲಿ ಜನಾರ್ಧನ ಪೂಜಾರಿ ಅವರ ವಿರುದ್ದ ಅವಹೇಳನಕಾರಿಯಾಗಿ ಬರಹ ಬರೆದು ಪೋಸ್ಟ್ ಮಾಡಲಾಗಿದೆ. ಜನಾರ್ದನ ಪೂಜಾರಿಯವರು, ಸ್ವಂತ ಪಕ್ಷದಲ್ಲಿ ನಿರಂತರ ಅಧಿಕಾರ ಅನುಭವಿಸಿ ಬಿಜೆಪಿ ಪರ ಬ್ಯಾಟಿಂಗ್ ಮಾಡುವ ವಿಚಿತ್ರ ವ್ಯಕ್ತಿ.‌ ಈವರೆಗೆ ಈತನನ್ನು ಹೈಕಮಾಂಡ್ ಕೂಡ ವಿರೋಧಿಸಿಲ್ಲ. ಈ ತರಹ ಯಾರಾದರೂ ಅಲ್ಪಸಂಖ್ಯಾತ ವ್ಯಕ್ತಿ ಮಾತನಾಡಿದ್ದಲ್ಲಿ ಕ್ಷಣ ಮಾತ್ರದಲ್ಲಿ ಕಾಂಗ್ರೆಸ್ ವಜಾಗೊಳಿಸುತ್ತಿತ್ತು.


ಒಂದು‌ ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ಸಿದ್ಧಾಂತ ನಿಲ್ಲಿಸಿ ಎಂದು ಬರೆಯಲಾಗಿದೆ. ಅಲ್ಲದೆ ಜನಾರ್ದನ ಪೂಜಾರಿಯವರ ಫೋಟೋ ಅಪ್ಲೋಡ್ ಮಾಡಿ ಅದರ ಮೇಲೆ “ಎಣ್ಣೆಯಲ್ಲಿ ಕರಿದ ಗೋಲಿ ಬಜೆ, ಬೆಂಕಿಯಲ್ಲಿ ಕರಿದ ಗೋಲಿ ಬಜೆ” ಎಂದು ಅವಹೇಳಕಾರಿಯಾಗಿ ಪೋಸ್ಟ್ ಮಾಡಿದ್ದು ಈ ಬಗ್ಗೆ ಬಿರುವೆರ್ ಕುಡ್ಲ ಸಂಘಟನೆ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

- Advertisement -

Latest News

error: Content is protected !!