Friday, June 26, 2026
Homeಕರಾವಳಿಬಂಟ್ವಾಳ : ಬಿ.ಸಿ.ರೋಡ್ ಪ್ಲೈ ವೋವರ್ ಅಡಿಯಲ್ಲಿ ಅನಾಥ ಸ್ಥಿತಿಯಲ್ಲಿ ಇನೋವಾ ಕಾರು ಪತ್ತೆ

ಬಂಟ್ವಾಳ : ಬಿ.ಸಿ.ರೋಡ್ ಪ್ಲೈ ವೋವರ್ ಅಡಿಯಲ್ಲಿ ಅನಾಥ ಸ್ಥಿತಿಯಲ್ಲಿ ಇನೋವಾ ಕಾರು ಪತ್ತೆ

- Advertisement -
- Advertisement -

ಬಂಟ್ವಾಳ :  ಕಳೆದ ಸುಮಾರು ಹತ್ತು ದಿನಗಳಿಂದ ಕೇರಳ ರಿಜಿಸ್ಟರ್ ಅಗಿರುವ ಬಿಳಿ ಬಣ್ಣದ ಇನೋವಾ ಕಾರು ವಾರಿಸುದಾರರಿಲ್ಲದೆ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಬಂಟ್ವಾಳದ ಬಿ.ಸಿ.ರೋಡ್ ಜಂಕ್ಷನ್ ನಲ್ಲಿರುವ ಪ್ಲೈ ವೋವರ್ ಅಡಿಯಲ್ಲಿ ಕೇರಳ ರಾಜ್ಯದ ರಿಜಿಸ್ಟರ್ ಅಗಿರುವ ಬಿಳಿ ಬಣ್ಣದ ಇನೋವಾ ಕಾರು ಪತ್ತೆಯಾಗಿದ್ದು ಇದರ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದೆ. ಅದಲ್ಲದೆ ವ್ಯಕ್ತಿಯೊಬ್ಬರ ಹೆಸರು ಬರೆದು ಅದರಲ್ಲಿ ಮೊಬೈಲ್ ಸಂಖ್ಯೆ ಸಮೂದಿಸಿ ವಾಟ್ಸಾಪ್ ಕರೆ ಮಾತ್ರ ಅಂತ ಒಂದು ಚೀಟಿ ಕಾಣುತ್ತಿದೆ.

 ಕೇರಳ ರಾಜ್ಯದ ನಿವಾಸಿ ಸಬೀಬ್ ಅಶ್ರಫ್ ಎಂಬವರ ಹೆಸರಿನಲ್ಲಿ  KL-14-Y-8999 ಈ ಕಾರಿನ ದಾಖಲೆಗಳಲ್ಲಿ ರಿಜಿಸ್ಟರ್ ಅಗಿರುತ್ತದೆ. ಬಂಟ್ವಾಳ ಪೊಲೀಸರು ಕಾರಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

- Advertisement -

Latest News

error: Content is protected !!