Thursday, June 4, 2026
Homeಕರಾವಳಿಸುಳ್ಯ; ಪಂಜದಲ್ಲಿ ಕೆಲಸಕ್ಕೆಂದು ಹೋದ ವ್ಯಕ್ತಿ ಶವ ಬಾವಿಯಲ್ಲಿ ಪತ್ತೆ

ಸುಳ್ಯ; ಪಂಜದಲ್ಲಿ ಕೆಲಸಕ್ಕೆಂದು ಹೋದ ವ್ಯಕ್ತಿ ಶವ ಬಾವಿಯಲ್ಲಿ ಪತ್ತೆ

- Advertisement -
- Advertisement -

ಸುಳ್ಯ: ಕೆಲಸಕ್ಕೆಂದು ಮನೆಯಿಂದ ಹೋದ ವ್ಯಕ್ತಿಯೊಬ್ಬರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿರುವ  ಸುಳ್ಯ ತಾಲೂಕಿನ ಪಂಜದಲ್ಲಿ ನಡೆದಿದೆ.

ಇಲ್ಲಿನ‌ ಸಮೀಪದ‌ ಪಂಬೆತ್ತಾಡಿ ಗ್ರಾಮದ ಪೆರ್ಮಾಜೆ ನಾರಾಯಣ ನಾಯ್ಕ ಮೃತ  ವ್ಯಕ್ತಿ. ಅವರು ಜ.16 ರಂದು ಮುಂಜಾನೆ ಮನೆಯಿಂದ ಕೆಲಸಕ್ಕೆಂದು ತೆರಳಿದ್ದರು. ಬಳಿಕ ಅವರು ಮನೆಗೆ ವಾಪಾಸಾಗದ ಕಾರಣ ಮನೆಯವರು ಹುಡುಕಾಟ ನಡೆಸಿದ್ದರು.

ಜ.19 ಕೂತ್ಕುಂಜ ಗ್ರಾಮದ ಸಂಪ ಎಂಬಲ್ಲಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಮನೆಯವರು ‍ಸ್ಥಳಕ್ಕೆ ಆಗಮಿಸಿ ಮೃತ ದೇಹ ಖಚಿತ ಪಡಿಸಿ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು‌ ದಾಖಲಿಸಿದ್ದಾರೆ. ಸಾವಿನ ಕುರಿತು ಪೋಲೀಸ್ ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!