Monday, June 8, 2026
Homeಕರಾವಳಿಉಡುಪಿಕಾಪು: ಕಂಕಣ ಭಾಗ್ಯ ಕರುಣಿಸುವಂತೆ ಕೋರಿ ಕೊರಗಜ್ಜನ ಮೊರೆ ಹೋದ ನಟಿ ಪ್ರೇಮಾ

ಕಾಪು: ಕಂಕಣ ಭಾಗ್ಯ ಕರುಣಿಸುವಂತೆ ಕೋರಿ ಕೊರಗಜ್ಜನ ಮೊರೆ ಹೋದ ನಟಿ ಪ್ರೇಮಾ

- Advertisement -
- Advertisement -

ಕಾಪು: ಕಂಕಣ ಭಾಗ್ಯ ಕರುಣಿಸುವಂತೆ ಕೋರಿ ಸ್ಯಾಂಡಲ್‌ ವುಡ್‌ ನಟಿ ಪ್ರೇಮಾ ಕೊರಗಜ್ಜನ ಬಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಾಪು ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾರಣಿಕದ ಕೊರಗಜ್ಜ ದೈವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮ ದೇವರ ದರ್ಶನ ಪಡೆದರು.

ಹಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದು ಒಂಟಿಯಾಗಿ ಜೀವನ ಸಾಗಿಸುತ್ತಿರುವ ನಟಿ ಪ್ರೇಮಾ ಇದೀಗ 2ನೇ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದು, ಕಂಕಣ ಭಾಗ್ಯ ಕರುಣಿಸುವಂತೆ ದೈವದ ಮೊರೆ ಹೋಗಿದ್ದಾರೆ. ಕಾಪು ಕೊರಗಜ್ಜ ಸನ್ನಿಧಿಯಲ್ಲಿ ಮದುವೆಗಾಗಿ ಪ್ರಾರ್ಥನೆ ಮಾಡಿದ್ದಾರೆ. ಈ ವೇಳೆ ನಟಿ ಪ್ರೇಮಾ ಜೊತೆ ತಮ್ಮ ಅಯ್ಯಪ್ಪ, ಪತ್ನಿ ನಟಿ ಅನು ಅಯ್ಯಪ್ಪ ಕೂಡ ಇದ್ದರು.

- Advertisement -

Latest News

error: Content is protected !!