Saturday, June 27, 2026
Homeತಾಜಾ ಸುದ್ದಿಮುಕ್ತಾಯ ಹಂತದಲ್ಲಿದೆ ಮೊದಲ ಕೇಬಲ್-ಸೈಡ್ ರೈಲು ಸೇತುವೆ: ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ

ಮುಕ್ತಾಯ ಹಂತದಲ್ಲಿದೆ ಮೊದಲ ಕೇಬಲ್-ಸೈಡ್ ರೈಲು ಸೇತುವೆ: ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ

- Advertisement -
- Advertisement -

ನವದೆಹಲಿ: ಭಾರತವು ತನ್ನ ಮೊದಲ ಕೇಬಲ್-ಸೈಡ್ ರೈಲು ಸೇತುವೆಯನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಪಡೆಯಲು ಸಿದ್ಧವಾಗಿದ್ದು, ಇದು ಈ ವರ್ಷದ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಜಮ್ಮು ಕಾಶ್ಮೀರದ ಕತ್ರಾ ಮತ್ತು ರಿಯಾಸಿಯನ್ನು ಸಂಪರ್ಕಿಸುವ ಇಂಜಿನಿಯರಿಂಗ್ ನ ಅದ್ಭುತಗಳಲ್ಲಿ ಒಂದಾದ, ನಿರ್ಮಾಣ ಹಂತದಲ್ಲಿರುವ ಅಂಜಿ ಖಾಡ್ ಸೇತುವೆಯು ಅಂಜಿ ನದಿಯ ಮೇಲಿರುವ ರಿಯಾಸಿ ಜಿಲ್ಲೆಯಲ್ಲಿದೆ. ಈ ಸೇತುವೆಯು ಸವಾಲಿನ ಉಧಮ್‌ಪುರ- ಶ್ರೀನಗರ- ಬಾರಾಮುಲ್ಲಾ ರೈಲು ಸಂಪರ್ಕದ ಒಂದು ಭಾಗವಾಗಿದೆ, ಹಿಮಾಲಯದ ಮೂಲಕ ಎತ್ತರದಲ್ಲಿ ಹಾದುಹೋಗುತ್ತದೆ.

ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸೇತುವೆಯ ಇತ್ತೀಚಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ
ಹಂಚಿಕೊಂಡಿದ್ದಾರೆ. “ಭವಿಷ್ಯಕ್ಕೆ ಸಿದ್ಧವಾಗಿರುವ ರಾಷ್ಟ್ರದ ಮೊದಲ ಕೇಬಲ್-ಸೈಡ್ ರೈಲು ಸೇತುವೆ, ಕಾಶ್ಮೀರವನ್ನು
ಸಂಪರ್ಕಿಸುವ ಅಂಜಿ ಖಾಡ್ ಸೇತುವೆ” ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.

ಈ ಸೇತುವೆಯು 473.25 ಮೀಟರ್ ಉದ್ದದ ಸೇತುವೆಯಾಗಿದ್ದು, ನದಿಯ ತಳದಿಂದ 331 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗುತ್ತಿದೆ. ಭಾರೀ ಬಿರುಗಾಳಿಗಳನ್ನು ನಿಭಾಯಿಸಲು ವಿನ್ಯಾಸಗೊಳಿಸಲಾದ ಸೇತುವೆಯನ್ನು 96 ಕೇಬಲ್‌ಗಳು ಬೆಂಬಲಿಸುತ್ತವೆ. ಈ ಪ್ರದೇಶದ ಅತ್ಯಂತ ಸಂಕೀರ್ಣವಾದ ಭೂವಿಜ್ಞಾನದ ಕಾರಣದಿಂದಾಗಿ ಚೆನಾಬ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕಮಾನು ಸೇತುವೆಯನ್ನು ನಿರ್ಮಿಸಲು ಅಸಾಧ್ಯವಾಗಿದೆ. ಅಂಜಿ ಖಾಡ್ ಸೇತುವೆಯು ಲಂಬ ಇಳಿಜಾರಿನಲ್ಲಿ ನಿರ್ಮಿಸಲಾದ ಏಕೈಕ ಪೈಲಾನ್ ಮಾತ್ರ ಇರುತ್ತದೆ.

ಇನ್ನು ಸೇತುವೆಯ ನಿರ್ಮಾಣದಲ್ಲಿ ಪಂಪ್ ಕಾಂಕ್ರೀಟಿಂಗ್ ಸಿಸ್ಟಮ್ ವ್ಯವಸ್ಥೆ ಸೇರಿದಂತೆ ವಿಶಿಷ್ಟ ಮತ್ತು ಸುಧಾರಿತ ತಂತ್ರಗಳು ಮತ್ತು ಉಪಕರಣಗಳನ್ನು ಬಳಸಲಾಗಿರುತ್ತದೆ. ಈ ಸೇತುವೆಯನ್ನು ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯನ್ನು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್‌ಸಿಎಲ್‌) ಅಭಿವೃದ್ಧಿಪಡಿಸುತ್ತಿದೆ.

- Advertisement -

Latest News

error: Content is protected !!