Tuesday, May 7, 2024
Homeಕ್ರೀಡೆಭಾರತದ ಮುಂದೆ ಮಂಡಿಯೂರಿದ ಆಸ್ಟ್ರೇಲಿಯಾ: 2-1 ರಿಂದ ಆಸಿಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದ...

ಭಾರತದ ಮುಂದೆ ಮಂಡಿಯೂರಿದ ಆಸ್ಟ್ರೇಲಿಯಾ: 2-1 ರಿಂದ ಆಸಿಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

spot_img
- Advertisement -
- Advertisement -

ಆಸ್ಟ್ರೇಲಿಯಾ: ಬ್ರಿಸ್ಬೇನ್‌ ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 3 ವಿಕೆಟ್‌ಗಳಿಂದ ಮಣಿಸುವ ಮೂಲಕ ಭಾರತ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ನೀಡಿದ್ದ 328 ರನ್ ಗುರಿ ಬೆನ್ನತ್ತಿದ ಭಾರತ ಅಂತಿಮ ದಿನದ ಕೊನೆಯ ಅವಧಿಯಲ್ಲಿ 7 ವಿಕೆಟ್ ಕಳೆದುಕೊಂಡು 329 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿದೆ.

ಪಂದ್ಯದ ಅಂತ್ಯದವರೆಗೂ ಕ್ರೀಸ್‌ನಲ್ಲಿ ನಿಂತು ಹೋರಾಟ ಮಾಡಿ ಗೆಲುವು ತಂದು ಕೊಟ್ಟ ರಿಷಬ್ ಪಂತ್ 89 ರನ್ ಗಳಿಸಿ ಅಜೇಯರಾಗುಳಿದರು. ಭಾರತ ತಂಡದ ಸಾಂಘಿಕ ಹೋರಾಟ ಅಂತಿಮ ಪಂದ್ಯದಲ್ಲಿ ಗೆಲುವು ತಂದುಕೊಟ್ಟಿದೆ. 328 ಗೆಲುವಿನ ಗುರಿಯೊಂದಿಗೆ ನಿನ್ನೆ ಕ್ರಿಸಿಗಿಳಿದಿದ್ದ ಭಾರತಕ್ಕೆ ಇಂದು ಆರಂಭದಲ್ಲೇ ರೋಹಿತ್ ಶರ್ಮಾ(7) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು.

ಬಳಿಕ ವೇಗವಾಗಿ ಕಮ್ ಬ್ಯಾಕ್ ಮಾಡಿದ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ದಿಟ್ಟ ಹೋರಾಟ ನಡೆಸಿದರು ಶುಭ್ಮನ್ ಗಿಲ್ ವೇಗವಾಗಿ 91 ರನ್ ಗಳಿಸಿ ಭಾರತ ಗೆಲುವಿನ ಆಸೆ ಹೆಚ್ಚು ಮಾಡಿದರು. ಬಳಿಕ ಚೇತೇಶ್ವರ್ ಪೂಜಾರ ತಾಳ್ಮೆಯ 56 ರನ್, ಅಂತಿಮ ಅವಧಿಯಲ್ಲಿ ಅರ್ಧಶತಕ ಸಿಡಿಸಿ ರಿಷಬ್ ಪಂತ್(89) ಭಾರತದ ಗೆಲುವಿನ ರೂವಾರಿಗಳಾದರು.

ಸ್ಕೋರ್ ವಿವರ:

ಆಸ್ಟ್ರೇಲಿಯಾ: 369 & 294
ಭಾರತ: 336 & 329/7

ರಿಷಬ್ ಪಂತ್ – ಅಜೇಯ 89
ಶುಭಮನ್ ಗಿಲ್ – 91
ಚೇತೇಶ್ವರ್ ಪೂಜಾರ – 56

- Advertisement -
spot_img

Latest News

error: Content is protected !!