Sunday, May 19, 2024
Homeತಾಜಾ ಸುದ್ದಿಮದುವೆಗೆ ಬಾರದವರಿಂದ ಗೂಗಲ್ ಪೇ, ಫೋನ್ ಪೇ ಮೂಲಕ ಉಡುಗೊರೆ ಪಡೆದ ಜೋಡಿ: ವೈರಲ್ ಆಯ್ತು...

ಮದುವೆಗೆ ಬಾರದವರಿಂದ ಗೂಗಲ್ ಪೇ, ಫೋನ್ ಪೇ ಮೂಲಕ ಉಡುಗೊರೆ ಪಡೆದ ಜೋಡಿ: ವೈರಲ್ ಆಯ್ತು ಸ್ಪೆಷಲ್ ಮ್ಯಾರೇಜ್ ಇನ್ವಿಟೇಷನ್

spot_img
- Advertisement -
- Advertisement -

ತಮಿಳುನಾಡು :ಕೊರೊನಾ ದಿಂದಾಗಿ ಈಗ ಅದ್ಧೂರಿ ಮದುವೆಗಳಿಗೆ ಬ್ರೇಕ್ ಬಿದ್ದಿದೆ. ಸಾವಿರಾರು ಜನ ಸೇರುತ್ತಿದ್ದ ಮದುವೆಗಳು ಕೆಲವೇ ಜನರ ಸಮ್ಮಖದಲ್ಲಿ ನಡೆಯುತ್ತಿದೆ. ಹಾಗಾಗಿ ಅದೆಷ್ಟೋ ಜೋಡಿ ಉಡುಗೊರೆಗಳನ್ನು ಮಿಸ್ ಮಾಡಿಕೊಳ್ಳುತ್ತಿದೆ. ಇದಕ್ಕೆ ತಮಿಳುನಾಡಿನ ಜೋಡಿಯೊಂದು ಸೂಪರ್ ಐಡಿಯಾ ಮಾಡಿದೆ.

ಹೌದು.. ತಮಿಳುನಾಡಿನ ಮಧುರೈನ ದಂಪತಿ ತಮ್ಮ ವಿವಾಹ ಸಮಾರಂಭದಲ್ಲಿ ಉಡುಗೊರೆಗಳನ್ನು ಸ್ವೀಕರಿಸಲು ಏನು ಮಾಡಿದ್ದಾರೆ ಎನ್ನುವ ಪ್ಲಾನ್‌ ಕೇಳಿದ್ರೆ ನಿಮಗೆ ಖಂಡಿತ ಶಾಕ್ ಆಗುತ್ತದೆ. ಕುಟುಂಬವೊಂದು ಮದುವೆಯ ಆಮಂತ್ರಣದ ಮೇಲೆ ತಮ್ಮ ಗೂಗಲ್ ಪೇ ಮತ್ತು ಫೋನ್ ಪೇ ಖಾತೆಗಳ QR ಸಂಕೇತಗಳನ್ನು ಮುದ್ರಿಸಿದ್ದು, ಇದೇ ವೇಳೆ ಅತಿಥಿಗಳು ಯಾವುದೇ ತೊಂದರೆಗಳಿಲ್ಲದೆ ಉಡುಗೊರೆ ನಗದನ್ನು ವರ್ಗಾಯಿಸಬಹುದು ಅಂತ ಹೇಳಿದೆ.

ವೈಯಕ್ತಿಕವಾಗಿ ಮದುವೆಗೆ ಹಾಜರಾಗಲು ಸಾಧ್ಯವಾಗದವರು ಉಡುಗೊರೆ ಹಣವನ್ನು ಡಿಜಿಟಲ್ ರೂಪದಲ್ಲಿ ವರ್ಗಾಯಿಸಿದ್ದಾರೆ ಎನ್ನಲಾಗಿದೆ. ‘ಸುಮಾರು 30 ಜನರು ಈ ಸೌಲಭ್ಯವನ್ನು ಬಳಸಿಕೊಂಡಿದ್ದು ಮತ್ತು ಅವರು ವಿವಾಹದ ಉಡುಗೊರೆಯಾಗಿ ಹಣವನ್ನು ನೀಡಿದ್ದಾರೆ’ ಎಂದು ವಧುವಿನ ತಾಯಿ ತಿಳಿಸಿದ್ದಾರೆ.’ನಮ್ಮ ಕುಟುಂಬದಲ್ಲಿ ಇಂತಹದನ್ನು ಪ್ರಯತ್ನಿಸುವುದು ಇದೇ ಮೊದಲು’ ಎಂದು ಅವರು ಹೇಳಿದ್ದು, ಮದುವೆಯ ಆಮಂತ್ರಣ ವೈರಲ್ ಆದ ನಂತರ, ಕುಟುಂಬಕ್ಕೆ ಸಾಕಷ್ಟು ಫೋನ್ ಕರೆಗಳು ಬರುತ್ತಿವೆ ಅಂತ ಅವರು ಹೇಳಿದ್ದಾರೆ.

- Advertisement -
spot_img

Latest News

error: Content is protected !!