Sunday, June 7, 2026
HomeUncategorizedದೇಶದಲ್ಲಿ ಕೊರೋನಾ ಗುಣಮುಖ ಪ್ರಮಾಣದಲ್ಲಿ ಏರಿಕೆ!!

ದೇಶದಲ್ಲಿ ಕೊರೋನಾ ಗುಣಮುಖ ಪ್ರಮಾಣದಲ್ಲಿ ಏರಿಕೆ!!

- Advertisement -
- Advertisement -

ದೆಹಲಿ: ಕಳೆದ 24ಗಂಟೆಗಳಲ್ಲಿ ಭಾರತದಲ್ಲಿ 43,393 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು 911 ಸಾವು ವರದಿಯಾಗಿ ಸಾವಿನ ಸಂಖ್ಯೆ 4,05,939 ಏರಿಕೆಯಾಗಿದೆಯೆಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.

ದೇಶದಲ್ಲಿ ಇದುವರೆಗೆ 3,07,52,950 ಕೊರೋನಾ ಸೋಂಕು ಪ್ರಕರಣ ದಾಖಲಾಗಿದ್ದು, ಪ್ರಸ್ತುತ 4,58,727 ಸಕ್ರಿಯ ಪ್ರಕರಣಗಳು ಇದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 44,291 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 2,98,43,825ಕ್ಕೆ ತಲುಪಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, 42,70,16,605 ಜನರನ್ನು ಕೋವಿಡ್ ಪರೀಕ್ಷೆಗೆ ಗುರಿಪಡಿಸಲಾಗಿದ್ದು, ಗುರುವಾರ 17,90,708 ಮಂದಿಯನ್ನು ಪರೀಕ್ಷಿಸಲಾಗಿದೆ ಎಂದು ತಿಳಿಸಿದೆ. ಭಾರತದಲ್ಲಿ ಗುಣಮುಖ ಪ್ರಮಾಣ 97.19 ಪರ್ಸೆಂಟ್ ಇದ್ದು, ಸಾವಿನ ಪ್ರಮಾಣ 1.32 ಪರ್ಸೆಂಟ್ ಇದೆ

- Advertisement -

Latest News

error: Content is protected !!