Saturday, June 6, 2026
HomeUncategorizedದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಮಲೇರಿಯಾ ಹಾಗೂ ಡೆಂಗ್ಯೂ ಪ್ರಕರಣಗಳು!!

ದಕ್ಷಿಣ ಕನ್ನಡದಲ್ಲಿ ಹೆಚ್ಚುತ್ತಿರುವ ಮಲೇರಿಯಾ ಹಾಗೂ ಡೆಂಗ್ಯೂ ಪ್ರಕರಣಗಳು!!

- Advertisement -
- Advertisement -

ಮಂಗಳೂರು : ಕೊರೋನಾ ಸೋಂಕಿನ ನಡುವೆಯೂ ಮಂಗಳೂರು ಜಿಲ್ಲೆಯಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ಅಬ್ಬರ ಹೆಚ್ಚಾಗುತ್ತಿದ್ದು, ರಾಜ್ಯದ ಶೇಕಡ 80 ರಷ್ಟು ಮಲೇರಿಯಾ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಏರಿಕೆಯಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿ ಮಾಡಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಜೂನ್‌ ತಿಂಗಳಿನಿಂದ ಏರಿಕೆಯಾಗುತ್ತಿದ್ದು, ಮೇ ತಿಂಗಳ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 277 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದವು. ಇದರಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿಯೇ 255 ಪ್ರಕರಣ ದಾಖಲಾಗಿವೆ. ಇದರ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಡೆಂಗ್ಯೂ ಅಬ್ಬರ ಕೂಡ ಜೋರಾಗುತ್ತಿದ್ದು ಮೇ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 122 ಪ್ರಕರಣ ಪತ್ತೆಯಾಗಿವೆ.

ಈ ವರ್ಷ ಪತ್ತೆಯಾದ ಜಿಲ್ಲೆಯ ಒಟ್ಟು 356 ಮಲೇರಿಯಾ ಪ್ರಕರಣಗಳಲ್ಲಿ 329 ಪ್ರಕರಣಗಳು ಮನಪಾ ವ್ಯಾಪ್ತಿಯಲ್ಲೇ ಪತ್ತೆಯಾಗಿವೆ. ಈ ವರ್ಷ ಡೆಂಘಿ ಬಂಟ್ವಾಳದಲ್ಲೇ ಹೆಚ್ಚು ಪತ್ತೆಯಾಗುತ್ತಿದೆ.

ಮಳೆಗಾಲದಲ್ಲಿ ಸೊಳ್ಳೆಗಳಿಂದ ರಕ್ಷಣೆ ಪಡೆಯಬೇಕು, ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಬಿಟ್ಟು ಬಿಟ್ಟು ಬರುವ ಚಳಿ ಜ್ವರ, ತಲೆ ನೋವು, ಮೈಕೈ, ನೋವು ಇದ್ದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆರೋಗ್ಯ ಇಲಾಖೆಯು ದಿನದ 24 ಗಂಟೆ ಉಚಿತ ಸೇವೆ ನೀಡುತ್ತಿದೆ. ಮೊಬೈಲ್‌ 9448556872 ಸಂಪರ್ಕಿಸಿ ಸೇವೆ ಪಡೆಯಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್‌ಚಂದ್ರ ಕುಲಾಲ್‌ ಮಾಹಿತಿ ನೀಡಿದ್ದಾರೆ.

ಕಳೆದ 4 ವರ್ಷಗಳ ಮಲೇರಿಯಾ ಹಾಗೂ ಡೆಂಗ್ಯೂ ಪ್ರಕರಣಗಳನ್ನು ಗಮನಿಸಿದರೆ ಈ ವರ್ಷ ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿ.

- Advertisement -

Latest News

error: Content is protected !!