Friday, May 17, 2024
HomeUncategorizedಜುಲೈ 20 ರೊಳಗೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ !!

ಜುಲೈ 20 ರೊಳಗೆ ದ್ವಿತೀಯ ಪಿಯು ಫಲಿತಾಂಶ ಪ್ರಕಟ !!

spot_img
- Advertisement -
- Advertisement -

ಬೆಂಗಳೂರು: ಕೊರೋನಾ ಕಾರಣದಿಂದಾಗಿ ರದ್ದು ಪಡಿಸಲಾದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಜುಲೈ.20ರೊಳಗೆ ಪ್ರಕಟಿಸಲಾಗುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಸ್ನೇಹಲ್ ಆರ್ ತಿಳಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜುಲೈ.20ರೊಳಗೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲು ಇಲಾಖೆ ಸಿದ್ಧತೆ ಕೈಗೊಂಡಿದೆ. ಅದಕ್ಕೂ ಮುನ್ನಾ, ವಿದ್ಯಾರ್ಥಿಗಳ ಎಸ್ ಎಸ್ ಎಲ್ ಸಿ ಮತ್ತು ಪ್ರಥಮ ಪಿಯುಸಿ ಅಂಕಗಳನ್ನು ಇಲಾಖೆಯ sts.karnataka.gov.in ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಜುಲೈ 10, 2021ರವರೆಗೆ ವೀಕ್ಷಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಅಂಕಪಟ್ಟಿಯಲ್ಲಿದ್ದ ಅಂಕಕ್ಕೂ, ವೆಬ್ ಸೈಟ್ ನಲ್ಲಿ ದಾಖಲಾಗಿರುವ ಅಂಕದಲ್ಲಿ ವ್ಯತ್ಯಾಸವಿದ್ದರೆ
ಕಾಲೇಜಿನ‌ ಆಡಳಿತ ಮಂಡಳಿಗೆ ಮಾಹಿತಿ ನೀಡಿ ಸರಿಪಡಿಸಬಹುದು. ತಿದ್ದುಪಡಿಗೆ ಪಿಯು ಬೋರ್ಡ್​ ಎರಡು ದಿನಗಳ ಕಾಲವಕಾಶ ನೀಡಿದೆ. ಜು.12ರ ಒಳಗೆ ತಿದ್ದುಪಡಿ ಮಾಡಿಕೊಳ್ಳದಿದ್ದರೆ ವೆಬ್ ಸೈಟ್ನಲ್ಲಿ ಇರುವ ಅಂಕದ ಆಧಾರದ ಮೇಲೆ ಪಿಯು ಫಲಿತಾಂಶ ಅಂತಿಮವಾಗಲಿದೆ ಎಂದು ಪಿಯು ಬೋರ್ಡ್ ಮಾಹಿತಿ ನೀಡಿದೆ.

ಎಸ್ ಎಸ್ ಎಲ್ ಸಿಯಲ್ಲಿ ಪಡೆದ ಅಂಕಗಳ ಶೇ. 45, ಪ್ರಥಮ ಪಿಯುಸಿಯ ಶೇ. 45 ಅಂಕ ಹಾಗೂ ದ್ವಿತೀಯ ಪಿಯುಸಿಯ ಅಸೆಸ್ಮೆಂಟ್ ಅಂಕ ಶೇ. 10ರಷ್ಟು ಪರಿಗಣನೆ ಮಾಡಿ ಅಂಕಗಳನ್ನ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಜುಲೈ 20ರೊಳಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸಿಗಲಿದೆ ಎನ್ನಲಾಗಿದ್ದು, ದ್ವಿತೀಯ ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 35 ಅಂಕದ ಜೊತೆಗೆ ಶೇ. 5ರಷ್ಟು ಗ್ರೇಸ್ ಅಂಕಗಳನ್ನ ನೀಡಲಾಗುತ್ತದೆ.

- Advertisement -
spot_img

Latest News

error: Content is protected !!