Saturday, June 6, 2026
HomeUncategorizedಹೆಂಡತಿಯನ್ನು ಬಿಟ್ಟು ನಾದಿನಿಯೊಂದಿಗೆ ಪರಾರಿಯಾದ ನವವಿವಾಹಿತ!!

ಹೆಂಡತಿಯನ್ನು ಬಿಟ್ಟು ನಾದಿನಿಯೊಂದಿಗೆ ಪರಾರಿಯಾದ ನವವಿವಾಹಿತ!!

- Advertisement -
- Advertisement -

ಬೆಳ್ತಂಗಡಿ: ಒಂಬತ್ತು ತಿಂಗಳ ಹಿಂದೆ ವಿವಾಹವಾಗಿದ್ದ ಹೆಂಡತಿಯನ್ನು ಬಿಟ್ಟು ನಾದಿನಿಯೊಂದಿಗೆ ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಕೈಕಂಬ ಎಂಬಲ್ಲಿ ನಡೆದಿದೆ.

9 ತಿಂಗಳ ಹಿಂದೆ ಮುಹಮ್ಮದ್ ಅವರ ಪುತ್ರಿ ಸೌಧಾ ಎಂಬಾಕೆಯನ್ನು ಮುಸ್ತಫಾ ಎಂಬಾತನಿಗೆ ಮದುವೆ ಮಾಡಿಕೊಡಲಾಗಿದ್ದು, ಆಗಾಗ ಮಗಳು ಹಾಗೂ ಅಳಿಯ ಮಾವನ ಮನೆಗೆ ಬಂದು ಹೋಗುತ್ತಿದ್ದರು. ಈ ಸಂದರ್ಭ ನಾದಿನಿ ರೈಹಾನಳ ಜೊತೆಗೆ ಅಳಿಯ ಮುಸ್ತಫಾ ಸಲುಗೆಯಿಂದ ಇದ್ದುದ್ದಲ್ಲದೇ ಪೋನ್ ಮುಖಾಂತರ ಕೂಡ ಮಾತನಾಡುತ್ತಿದ್ದರು ಎನ್ನಲಾಗಿದೆ.

ಇತ್ತೀಚಿಗೆ ಸೌಧಾ ಹಾಗೂ ಮುಸ್ತಫಾ ನಡುವೆ ಮನಸ್ತಾಪವಾಗಿದ್ದರಿಂದ, ಸೌಧಾ ತನ್ನ ತವರು ಮನೆಯಲ್ಲಿಯೇ ಇದ್ದಳು. ಜು.8 ರಂದು ಬೆಳಿಗ್ಗೆ ಸುಮಾರು 6-45 ಗಂಟೆಗೆ ಮುಸ್ತಫಾ ಹಾಗೂ ಅವನ ತಾಯಿ ಕಾರಿನಲ್ಲಿ ಕನ್ಯಾಡಿಯ ಕೈಕಂಬದಲ್ಲಿರುವ ಮಾವನ ಮನೆಗೆ ಬಂದಿದ್ದು, ಆ ಸಮಯ ನಾದಿನಿ ರೈಹಾನಳು ಮನೆಯಲ್ಲಿ ಯಾರಿಗೂ ಹೇಳದೇ ಬ್ಯಾಗೊಂದನ್ನು ಹಿಡಿದುಕೊಂಡು ಬಾವನ ಜೊತೆ ಕಾರುಹತ್ತಿ ಹೋಗಿದ್ದಾಳೆ.

ಸದ್ಯ ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.

- Advertisement -

Latest News

error: Content is protected !!