ನವದೆಹಲಿ : ಕೋವಿಡ್-19 ಪ್ರಯಾಣ ಮಾರ್ಗಸೂಚಿಗಳಿಗೆ ಮತ್ತಷ್ಟು ಸಡಿಲಿಕೆ ನೀಡಿರುವ ಕೇಂದ್ರ ಸರ್ಕಾರ ವಿದೇಶಿ ಪ್ರಜೆಗಳು, ಭಾರತೀಯ ಪ್ರಜೆಗಳು ಭಾರತಕ್ಕೆ ಪ್ರಯಾಣಿಸಲು ಅನುಮತಿ ನೀಡಲು ಇಂದು ನಿರ್ಧರಿಸಿದೆ. ಈ ಮೂಲಕ ಕೊರೋನಾ ಸೋಂಕಿನಿಂದಾಗಿ ವಿದೇಶಿಗರು, ವಿದೇಶದಲ್ಲಿದ್ದಂತ ಭಾರತೀಯ ಪ್ರಜೆಗಳು ಆಗಮನಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿದೆ.
ಪ್ರವಾಸಿ ವೀಸಾ ಹೊರತುಪಡಿಸಿ, ಭಾರತಕ್ಕೆ ಭೇಟಿ ನೀಡಲು ಬಯಸುವ ಎಲ್ಲಾ ಒಸಿಐ ಮತ್ತು ಪಿಐಓ ಕಾರ್ಡ್ ಹೊಂದಿರುವವರು, ಇತರ ಎಲ್ಲಾ ವಿದೇಶಿ ಪ್ರಜೆಗಳು ಅಧಿಕೃತ ವಿಮಾನ ನಿಲ್ದಾಣಗಳು, ಬಂದರು ಗಳ ವಲಸೆ ಚೆಕ್ ಪೋಸ್ಟ್ ಗಳ ಮೂಲಕ, ವಿಮಾನ ಅಥವಾ ನೀರಿನ ಮಾರ್ಗಗಳ ಮೂಲಕ ಪ್ರವೇಶಿಸಲು ಅವಕಾಶ ನೀಡಲಾಗುವುದು.
ಇದರಲ್ಲಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ಕಾರ್ಯಾಚರಣೆ ಗೊಂಡ ವಿಮಾನ, ವಿಮಾನ ಸಂಚಾರ ವ್ಯವಸ್ಥೆ ಅಥವಾ ನಾಗರಿಕ ವಿಮಾನಯಾನ ಸಚಿವಾಲಯದ ಅನುಮತಿ ಮೇರೆಗೆ ಯಾವುದೇ ನಿಗದಿತ ವಲ್ಲದ ವಾಣಿಜ್ಯ ವಿಮಾನಗಳನ್ನು ಒಳಗೊಂಡಿದೆ. ಆದರೆ, ಅಂತಹ ಎಲ್ಲ ಪ್ರಯಾಣಿಕರು ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


