Monday, April 29, 2024
Homeತಾಜಾ ಸುದ್ದಿಅರುಣಾಚಲ ಗಡಿಯಲ್ಲಿ 200 ಚೀನಾ ಯೋಧರನ್ನು ಹಿಮ್ಮೆಟ್ಟಿದ ಭಾರತೀಯ ಸೇನೆ

ಅರುಣಾಚಲ ಗಡಿಯಲ್ಲಿ 200 ಚೀನಾ ಯೋಧರನ್ನು ಹಿಮ್ಮೆಟ್ಟಿದ ಭಾರತೀಯ ಸೇನೆ

spot_img
- Advertisement -
- Advertisement -

ನವದೆಹಲಿ: ಭಾರತ ಮತ್ತು ಚೀನಾ ಯೋಧರ ಮಧ್ಯೆ ಮತ್ತೆ ಘರ್ಷಣೆ ನಡೆದಿದೆ. ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆಯ (Line of Actual Control (LAC)) ಸಮೀಪದಲ್ಲಿ ಚೀನಾದ ಸುಮಾರು 200 ಯೋಧರನ್ನು ಹಿಮ್ಮೆಟ್ಟಿಸಲಾಗಿದೆ.

ಕಳೆದ ವಾರ ಚೀನಾದ ಗಡಿಗೆ ಸಮೀಪದಲ್ಲಿ ಗಸ್ತು ತಿರುಗುತ್ತಿದ್ದ ಸಮಯದಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಘರ್ಷಣೆ ಉಂಟಾಗಿದೆ. ಗಡಿಗೆ ಸಮೀಪ ಬಂದಿದ್ದ ಚೀನಾದ ಸುಮಾರು 200 ಯೋಧರನ್ನು ಭಾರತದ ಪಡೆಗಳು ತಡೆ ಹಿಡಿದಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಉಭಯ ಪಡೆಗಳ ಕಮಾಂಡರ್‌ಗಳು ವಿಚಾರವನ್ನು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಅನ್ವಯ ಸ್ಥಳೀಯ ಕಮಾಂಡರ್ ಗಳು ಸಮಸ್ಯೆಯನ್ನು ಪರಿಹರಿಸಿದ ನಂತರ ಎರಡೂ ಕಡೆಯ ಪಡೆಗಳು ಹಿಂದಿರುಗಿವೆ. ಕೆಲವು ಗಂಟೆಗಳ ವರೆಗೂ ಭಾರತ-ಚೀನಾ ಪಡೆಗಳ ನಡುವೆ ಘರ್ಷಣೆ ನಡೆದಿದೆ, ಆದರೆ ಘರ್ಷಣೆಯಲ್ಲಿ ಭಾರತದ ಪಡೆಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

- Advertisement -
spot_img

Latest News

error: Content is protected !!