Thursday, May 16, 2024
Homeಚಿಕ್ಕಮಗಳೂರುಶೃಂಗೇರಿಗೆ ಕುಟುಂಬ ಸಮೇತರಾಗಿ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೊವಿಂದ್ !

ಶೃಂಗೇರಿಗೆ ಕುಟುಂಬ ಸಮೇತರಾಗಿ ಆಗಮಿಸಿದ ರಾಷ್ಟ್ರಪತಿ ರಾಮನಾಥ್ ಕೊವಿಂದ್ !

spot_img
- Advertisement -
- Advertisement -

ಚಿಕ್ಕಮಗಳೂರು : ರಾಜ್ಯಕ್ಕೆ ಆಗಮಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಇಂದು ಶೃಂಗೇರಿಗೆ ಭೇಟಿ ನೀಡಿದ್ದು,ಶೃಂಗೇರಿಯ ನವರಾತ್ರಿ ಉತ್ಸವದಲ್ಲಿ ಭಾಗಿಯಾಗಿದ್ದಾರೆ.

ಕುಟುಂಬ ಸಮೇತರಾಗಿ ಶೃಂಗೇರಿ ಶಾರದಾಂಬೆ ದೇವಾಲಯ ಪ್ರವೇಶ ಮಾಡಿದ್ದು, ಮಠದ ವತಿಯಿಂದ ರಾಷ್ಟ್ರಪತಿಗಳಿಗೆ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗಿದೆ. ಆನೆ, ಅಶ್ವ, ಕುಂಭದೊಂದಿಗೆ ರಾಷ್ಟ್ರಪತಿ ಕೋವಿಂದ್​ ಅವರಿಗೆ ಸ್ವಾಗತಿಸಲಾಗಿದೆ. ಶಾರದಾಂಬೆಯ ದರ್ಶನ ಬಳಿಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವತ್ರಯರ ಆಶೀರ್ವಾದ ಪಡೆಯಲಿದ್ದಾರೆ. ಆ ಬಳಿಕ ನವರಾತ್ರಿ ಉತ್ಸವದಲ್ಲಿ ಕುಟುಂಬ ಸಮೇತರಾಗಿ ರಾಷ್ಟ್ರಪತಿ ಭಾಗಿಯಾಗಲಿದ್ದಾರೆ. ಸಂಜೆ ನಾಲ್ಕು ಗಂಟೆವರೆಗೂ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗಿಯಾಗಲಿದ್ದಾರೆ.

ಇನ್ನು ರಾಷ್ಟ್ರಪತಿಗಳ ಆಗಮನದಿಂದ ಚಿಕ್ಕಮಗಳೂರು ಜಿಲ್ಲಾಡಳಿತ ಶೃಂಗೇರಿಯ ಜನತೆಗೆ ಮಹತ್ವದ ಸೂಚನೆ ನೀಡಿದ್ದು,ಅಕ್ಟೋಬರ್ 8 ರಂದು ಜನರು, ದನ, ಕರು, ಹಂದಿ, ನಾಯಿ ಕೋಳಿಗಳನ್ನು ರಸ್ತೆಗೆ ಬಿಡದಂತೆ ಆದೇಶಿಸಿದೆ. ರಾಷ್ಟ್ರಪತಿ ಭೇಟಿ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

- Advertisement -
spot_img

Latest News

error: Content is protected !!