Wednesday, October 14, 2026
Homeತಾಜಾ ಸುದ್ದಿ‌ಬೆಳ್ತಂಗಡಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪಿಲಿಗೂಡು ಶಾಲಾ‌ ವಿದ್ಯಾರ್ಥಿಗಳಿಂದ ಜಾಥಾ

‌ಬೆಳ್ತಂಗಡಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪಿಲಿಗೂಡು ಶಾಲಾ‌ ವಿದ್ಯಾರ್ಥಿಗಳಿಂದ ಜಾಥಾ

- Advertisement -
- Advertisement -

‌ಬೆಳ್ತಂಗಡಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಪಿಲಿಗೂಡು ಶಾಲಾ‌ ವಿದ್ಯಾರ್ಥಿಗಳಿಂದ ಜಾಥಾ ನಡೆಯಿತು. ಶಾಲೆಯಲ್ಲಿ ಧ್ವಜಾರೋಹಣ ನಡೆಸಿದ ಬಳಿಕ ಧ್ವಜವನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಪಿಲಿಗೂಡು ಶಾಲೆಯಿಂದ ಬಸ್ ನಿಲ್ದಾಣ ಮಾರ್ಗವಾಗಿ ಮಾವಿನಕಟ್ಟೆ ಬಸ್ ನಿಲ್ದಾಣದವರೆಗೆ ಹೆದ್ದಾರಿಯಲ್ಲಿ ಸಾಗಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭುವನೇಶ್ವರ ಜಿ., ಮುಖ್ಯಶಿಕ್ಷಕ ವೀರೇಂದ್ರ ಪಾಟೀಲ್ ನಾಯಕ್, ಶಿಕ್ಷಕಕಿಯರಾದ  ಚಂದ್ರಕ್ಕಿ, ಅನಿತಾ, ದೀಕ್ಷಾ, ಸೌಮ್ಯಾ ಕೆ., ಹಳೆ ವಿದ್ಯಾರ್ಥಿಗಳು, ಅಕ್ಷರ ದಾಸೋಹ ಸಿಬ್ಬಂದಿ, ಊರ ನಾಗರೀಕರು ಜಾಥಾದಲ್ಲಿ ಭಾಗವಹಿಸಿದ್ದರು.

- Advertisement -

Latest News

error: Content is protected !!