Friday, June 5, 2026
Homeಕರಾವಳಿ‌ಪುತ್ತೂರು;ವ್ಯಕ್ತಿಯೊಬ್ಬರಿಂದ ನಗದು ದೋಚಿದ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

‌ಪುತ್ತೂರು;ವ್ಯಕ್ತಿಯೊಬ್ಬರಿಂದ ನಗದು ದೋಚಿದ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಪುತ್ತೂರು: ವ್ಯಕ್ತಿಯೊಬ್ಬರಿಂದ ಹಣ ದೋಚಿದ ಪ್ರಕರಣದದಲ್ಲಿ ಕೋರ್ಟ್ ಗೆ  ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು ಬನ್ನೂರಿನಲ್ಲಿ ಬಂಧಿಸಿದ್ದಾರೆ. ಉಪ್ಪಿನಂಗಡಿ ನಿನ್ನಿಕಲ್ಲು ನಿವಾಸಿ ಶರತ್‌ ಬಂಧಿತ ಆರೋಪಿ.

ಶರತ್‌ 2016ರಲ್ಲಿ ಪುತ್ತೂರು ಪರಿಸರದಲ್ಲಿ ವ್ಯಕ್ತಿಯೊಬ್ಬರ ನಗದು ದೋಚಿದ ಪ್ರಕರಣದಲ್ಲಿ ಬಂಧಿತ. ಬಳಿಕದ ಬೆಳವಣಿಗೆಯಲ್ಲಿ ಜಾಮೀನು ಪಡೆದು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ನ್ಯಾಯಾಲಯ ಆರೋಪಿ ಶರತ್‌ ಬಂಧನಕ್ಕೆ ವಾರಂಟ್‌ ಜಾರಿ ಮಾಡಿತ್ತು.

ತನಿಖೆ ಕೈಗೆತ್ತಿಕೊಂಡ ಪುತ್ತೂರು ನಗರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಸುನೀಲ್‌ ಕುಮಾರ್‌ ಅವರ ಮಾರ್ಗದರ್ಶನದಂತೆ ಎ.ಎಸ್‌.ಐ. ಚಂದ್ರ, ಹೆಡ್‌ ಕಾನ್‌ಸ್ಟೆಬಲ್‌ ಪರಮೇಶ್ವರ ಮತ್ತು ಜಗದೀಶ್‌ ಅವರು ಆರೋಪಿಯನ್ನು ಬನ್ನೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ

- Advertisement -

Latest News

error: Content is protected !!