- Advertisement -
![]()
- Advertisement -
ಶಿಶಿಲ: ದ.ಕ ಜಿಲ್ಲೆಯ ಮತ್ಸ್ಯ ತೀರ್ಥ ಪ್ರಖ್ಯಾತ ಶ್ರೀ ಶಿಶಿಲೆಶ್ವರ ದೇವಾಲಯದಲ್ಲಿ 75 ತುಪ್ಪದ ದೀಪ ಬೆಳಗುವ ಮೂಲಕ ಅಮೃತ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.


ಗೊದೊಳಿ ಮುಹೂರ್ತದಲ್ಲಿ ಶಿಶಿಲ ದೇವಾಲಯದ ಆಡಳಿತ ಮೊಕ್ತೆಸರರಾದ ಶ್ರೀನಿವಾಸ ಮೂಡೆತಾಯರು ತುಪ್ಪದ ದೀಪ ಬೆಳಗಿ ಶುಭಾಶಯ ಕೋರಿದರು. ಭಾರತ ಮಾತೆ ಜಗತ್ತಿನ ತಾಯಿಯಾಗಿ ಬೆಳಗಲಿ.ಭಾರತ ಜಗತ್ತಿಗೆ ಗುರುವಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮ ಮೊದಲು ರಾಷ್ಟ್ರಗೀತೆಯನ್ನು ಹಾಡಿ, 75 ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಲಾಯಿತು.ಬಿ ಜಯರಾಮ ನೆಲ್ಲಿತ್ತಾಯ ಶಿಶಿಲ ಪ್ರಸ್ತಾಪನೆ ಮಾತುಗಳನ್ನು ಆಡಿ ಸ್ವಾತಂತ್ರ್ಯೋತ್ಸವದ ಶುಭ ಕೋರಿದರು .

ಕಾರ್ಯಕ್ರಮದಲ್ಲಿ ದೇವಾಲಯದ ಮುಖ್ಯ ಅರ್ಚಕರಾದ ರಾಮ ಕಾರಂತ, ನಾರಾಯಣ ಭಟ್,ಶೀನಪ್ಪ, ವೀರಪ್ಪ, ಸೂರ್ಯನಾರಾಯಣ ರಾವ್, ದಿವಾಕರ ರಾವ್, ಪ್ರಜ್ವಲ್ ಮಂಗಳೂರು ಹಿಂದೂ ಯುವ ಸೇನೆ ಕಾರ್ಯಕರ್ತರು, ಮುಂತಾದವರು ಹಾಜರಿದ್ದರು.
- Advertisement -


