Saturday, June 27, 2026
Homeಅಪರಾಧಸ್ಯಾಂಡಲ್ ವುಡ್ ನಟಿಗೆ ರೌಡಿ ಶೀಟರ್ ಕುಣಿಗಲ್ ಗಿರಿ ಅಣ್ಣನಿಂದ ವಂಚನೆ : ಮದುವೆಯಾಗಿ...

ಸ್ಯಾಂಡಲ್ ವುಡ್ ನಟಿಗೆ ರೌಡಿ ಶೀಟರ್ ಕುಣಿಗಲ್ ಗಿರಿ ಅಣ್ಣನಿಂದ ವಂಚನೆ : ಮದುವೆಯಾಗಿ ಚಿನ್ನಾಭರಣ ಹಾಗೂ ಹಣದೊಂದಿಗೆ ಪರಾರಿ

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ನಟಿಯೊಬ್ಬಳಿಗೆ ರೌಡಿಯೊಬ್ಬನ ಅಣ್ಣ ಮನೆಯಲ್ಲೇ ತಾಳಿ ಕಟ್ಟಿ ಗಂಡನಂತೆ ನಟಿಸಿದ್ದಲ್ಲದೆ, ಬಳಿಕ ಚಿನ್ನಾಭರಣ ಹಾಗೂ ಹಣದೊಂದಿಗೆ ಪರಾರಿಯಾಗಿ, ನಾನು ರೌಡಿಯ ಅಣ್ಣ ಎಂದು ಧಮಕಿ ಹಾಕಿ ಬೆದರಿಸಿದ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ.

ರೌಡಿಶೀಟರ್ ಆಗಿರುವ ಕುಣಿಗಲ್ ಗಿರಿ ಎಂಬಾತನ ಅಣ್ಣ ಹರೀಶ್​ ಎಂಬವನೇ ಆರೋಪಿ. ಈತ ಸ್ಯಾಂಡಲ್​ವುಡ್​ನಲ್ಲಿ ಸಹಕಲಾವಿದೆ ಆಗಿರುವ, ರಾಜಗೋಪಾಲನಗರದ ನಿವಾಸಿ ಯುವತಿಯ ಹಿಂದೆ ಬಿದ್ದಿದ್ದು, ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ಆಕೆಯನ್ನು ಮದುವೆಯಾಗಿ ಬಲೆಗೆ ಬೀಳಿಸಿಕೊಂಡಿದ್ದ ಈತ ಮನೆಯಲ್ಲೇ ತಾಳಿಯನ್ನೂ ಕಟ್ಟಿದ್ದ.

ತಾಳಿ ಕಟ್ಟಿ ಗಂಡನಂತೆ ನಟಿಸಿದ್ದ ಹರೀಶ್ 180 ಗ್ರಾಮ್ ಚಿನ್ನಾಭರಣ ಹಾಗೂ 2.5 ಲಕ್ಷ ರೂ. ನಗದಿನೊಂದಿಗೆ ಪರಾರಿಯಾಗಿದ್ದಾನೆ. ಈ ಬಗ್ಗೆ ಯುವತಿ ರಾಜಗೋಪಾಲನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ. ಆಗ ಆತ ಕರೆ ಮಾಡಿ, ನನ್ನ ತಮ್ಮ ಕುಣಿಗಲ್ ಗಿರಿ ರೌಡಿ, ದೂರು ವಾಪಸ್ ಪಡೆದರೆ ಸರಿ, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ರೌಡಿಶೀಟರ್ ಕುಣಿಗಲ್ ಗಿರಿ ಕೂಡ ಜೈಲಿನಿಂದಲೇ ಕರೆ ಮಾಡಿ ಕೇಸು ವಾಪಸ್ ಪಡೆಯುವಂತೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಯುವತಿ ಹರೀಶ್​ ಮಾತ್ರವಲ್ಲದೆ ಗಿರಿ ವಿರುದ್ಧವೂ ದೂರು ನೀಡಿದ್ದು, ಕ್ರಮಕೈಗೊಳ್ಳುವಂತೆ ಕೋರಿಕೊಂಡಿದ್ದಾಳೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

- Advertisement -

Latest News

error: Content is protected !!