Sunday, May 19, 2024
Homeಕರಾವಳಿಕೇರಳದಲ್ಲಿ ಕೈ ಮೀರಿದ ಕೊರೋನಾ ಸೋಂಕು;ಮಂಗಳೂರು ಗಡಿಯಲ್ಲಿ ಹೈ ಅಲರ್ಟ್!!

ಕೇರಳದಲ್ಲಿ ಕೈ ಮೀರಿದ ಕೊರೋನಾ ಸೋಂಕು;ಮಂಗಳೂರು ಗಡಿಯಲ್ಲಿ ಹೈ ಅಲರ್ಟ್!!

spot_img
- Advertisement -
- Advertisement -

ಮಂಗಳೂರು: ಕೇರಳದಲ್ಲಿ ಅತೀ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳೂರು ಗಡಿಯಲ್ಲಿ ಮತ್ತಷ್ಟು ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಮಂಗಳೂರಿನ ಕರ್ನಾಟಕ-ಕೇರಳ ಗಡಿ ತಲಪಾಡಿಯಲ್ಲಿ ಟೈಟ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ.

ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿ ಮೂಲಕ ತಪಾಸಣೆ ಚುರುಕು ಮಾಡಲಾಗಿದ್ದು, ಕೇರಳದಿಂದ ಬರುವ ಕಾರು, ಬೈಕ್, ಬಸ್ಸು ಸೇರಿ ಎಲ್ಲಾ ರೀತಿಯ ವಾಹನಗಳ ತಪಾಸಣೆ ಮಾಡಲಾಗುತ್ತಿದೆ.

ಒಂದು ಡೋಸ್ ಕೋವಿಡ್ ಲಸಿಕೆ ಅಥವಾ ನೆಗೆಟಿವ್ ರಿಪೋರ್ಟ್ ಇದ್ದವರಿಗಷ್ಟೇ ಎಂಟ್ರಿ ಕೊಡಲಾಗುತ್ತಿದೆ. ಯಾವುದೂ ಇಲ್ಲದೇ ಬರುವ ಪ್ರಯಾಣಿಕರಿಗೆ ಗಡಿಯಲ್ಲೇ ಆರ್ ಟಿಪಿಸಿಆರ್ ಟೆಸ್ಟ್ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆಯ ನಾಲ್ವರು ಸಿಬ್ಬಂದಿಗಳನ್ನು ನೇಮಿಸಿದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕೇರಳದಿಂದ ಬರುವ ಬಸ್ ಪ್ರಯಾಣಿಕರನ್ನು ಗಡಿಯಲ್ಲಿ ಇಳಿಸಿ ತಪಾಸಣೆ ಮಾಡುವಂತೆ ಸೂಚಿಸಿದೆ.ಸಮರ್ಪಕ ವರದಿ ಇದ್ದರಷ್ಟೇ ಮತ್ತೆ ಮಂಗಳೂರು ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ.


ಸಮರ್ಪಕ ವರದಿ ಇದ್ದರಷ್ಟೇ ಮತ್ತೆ ಮಂಗಳೂರು ಬಸ್ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಕೇರಳದಲ್ಲಿ ನಿನ್ನೆಯೂ 22 ಸಾವಿರ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಕಾಸರಗೋಡಿನಲ್ಲಿ 650ಕ್ಕೂ ಅಧಿಕ ಕೇಸ್ ವರದಿಯಾಗಿವೆ

- Advertisement -
spot_img

Latest News

error: Content is protected !!