Wednesday, June 3, 2026
Homeಕರಾವಳಿಸರ್ವಧರ್ಮದ ಪ್ರಾರ್ಥನೆಯೊಂದಿಗೆ ‘ಇನ್‌ಲ್ಯಾಂಡ್ ಎಲೋರಾ’ ವಸತಿ ಸಮುಚ್ಚಯ ಉದ್ಘಾಟನೆ

ಸರ್ವಧರ್ಮದ ಪ್ರಾರ್ಥನೆಯೊಂದಿಗೆ ‘ಇನ್‌ಲ್ಯಾಂಡ್ ಎಲೋರಾ’ ವಸತಿ ಸಮುಚ್ಚಯ ಉದ್ಘಾಟನೆ

- Advertisement -
- Advertisement -

ಮಂಗಳೂರು: ಮಣ್ಣಗುಡ್ಡದ ಮಠದಕಣಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ‘ಇನ್‌ಲ್ಯಾಂಡ್ ಎಲೋರಾ’ ವಸತಿ ಸಮುಚ್ಚಯವನ್ನು ಸರ್ವಧರ್ಮದವರ ಏಕತೆಯೊಂದಿಗೆ ಬುಧವಾರದಂದು ಉದ್ಘಾಟಿಸಲಾಯಿತು.

ಫಾ. ಡಾ. ರೋಕಿ ಡಿಕುನ್ಹ, ಮೌಲಾನಾಪಿ.ಎಸ್. ಮುಹಮ್ಮದ್‌ ಕಾಮಿಲ್ ಸಖಾಫಿ ಮದನಿ ನಗರ, ಬಾಲಂಭಟ್ ಮಠದ ಗಿರಿಧರ್ ಭಟ್‌ರವರು ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಸತಿ ಸಮುಚ್ಛಯವನ್ನು ಆಶೀರ್ವದಿಸಿದರು.

ನಂತರದಲ್ಲಿ ಮನಪಾ ಮಾಜಿ ಸದಸ್ಯ ಜಗದೀಶ್ ಶೆಟ್ಟಿ ರಿಬ್ಬನ್ ಕತ್ತರಿಸುವ ಮೂಲಕ ಎಲೋರಾ ವಸತಿ ಸಮುಚ್ಛಯವನ್ನು ಉದ್ಘಾಟಿಸಿ, ಶುಭ ಹಾರೈಸಿದರು.

ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ, ಸುಬ್ರಾಯ ಬಾಳಿಗ, ಶಿವಾನಂದ ಆರ್ಯ, ಇನ್‌ಲ್ಯಾಂಡ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹ್ಮದ್ ಹಾಗೂ ಮೇರಾಜ್ ಯೂಸುಫ್, ವಾಹಜ್ ಯೂಸುಫ್ ಉಪಸ್ಥಿತರಿದ್ದರು.

- Advertisement -

Latest News

error: Content is protected !!