Monday, June 8, 2026
HomeWorldರಾಷ್ಟ್ರ ರಾಜಧಾನಿಯಲ್ಲಿರುವ ಕಾಂಗ್ರೆಸ್ ಪಕ್ಷದ 2 ಪ್ರಮುಖ ಕಚೇರಿಗಳನ್ನು ಖಾಲಿ ಮಾಡುವಂತೆ ಸೂಚನೆ

ರಾಷ್ಟ್ರ ರಾಜಧಾನಿಯಲ್ಲಿರುವ ಕಾಂಗ್ರೆಸ್ ಪಕ್ಷದ 2 ಪ್ರಮುಖ ಕಚೇರಿಗಳನ್ನು ಖಾಲಿ ಮಾಡುವಂತೆ ಸೂಚನೆ

- Advertisement -
- Advertisement -

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಕಾಂಗ್ರೆಸ್ ಪಕ್ಷದ ಎರಡು ಪ್ರಮುಖ ಕಚೇರಿಗಳನ್ನು ಖಾಲಿ ಮಾಡುವಂತೆ ಸೂಚನೆ ನೀಡಲಾಗಿದ್ದು, ಮಾರ್ಚ್ 28ರವರೆಗೆ ಅಂತಿಮ ಗಡುವನ್ನು ನೀಡಲಾಗಿದೆ.

24 ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಚೇರಿ ಮತ್ತು 5 ರೈಸಿನಾ ರಸ್ತೆಯಲ್ಲಿರುವ ಮತ್ತೊಂದು ಪ್ರಮುಖ ಕಚೇರಿಯನ್ನು ತೆರವು ಮಾಡಲು ತಿಳಿಸಿದ್ದು, ಇದು ವಿರೋಧ ಪಕ್ಷ ಮತ್ತು ಸರಕಾರದ ನಡುವೆ ಹೊಸ ಜಟಾಪಟಿಗೆ ಕಾರಣವಾಗಿದೆ.

ಇನ್ನು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ದೃಢಪಡಿಸಿರುವ ಮಾಹಿತಿ ಪ್ರಕಾರ, ಕೆಲವು ದಿನಗಳ ಹಿಂದೆಯೇ ನೋಟಿಸ್ ನೀಡಲಾಗಿದ್ದು, ಪಕ್ಷದ ಮುಂದೆ ಲಭ್ಯವಿರುವ ಕಾನೂನು ಆಯ್ಕೆಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

- Advertisement -

Latest News

error: Content is protected !!