Friday, November 20, 2026
Homeಕರಾವಳಿಮಂಗಳೂರುಬಂಟ್ವಾಳ: ಗಡಿಪಾರು ಆದೇಶಕ್ಕೆ ಒಳಗಾಗಿರುವ ನರಸಿಂಹ ಮಾಣಿ ನಿವಾಸಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

ಬಂಟ್ವಾಳ: ಗಡಿಪಾರು ಆದೇಶಕ್ಕೆ ಒಳಗಾಗಿರುವ ನರಸಿಂಹ ಮಾಣಿ ನಿವಾಸಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

- Advertisement -
- Advertisement -

ಬಂಟ್ವಾಳ: ಗಡಿಪಾರು ಆದೇಶಕ್ಕೆ ಒಳಗಾಗಿರುವ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರ ನಿವಾಸಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಭೇಟಿ ನೀಡಿ, ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಧೈರ್ಯ ತುಂಬಿದರು.

ನರಸಿಂಹ ಮಾಣಿ ಅವರ ಗಡಿಪಾರು ಕ್ರಮದ ಹಿನ್ನೆಲೆಯಲ್ಲಿ ಅವರ ಮನೆಗೆ ತೆರಳಿದ ಶಾಸಕರು, ಕುಟುಂಬಸ್ಥರ ಯೋಗಕ್ಷೇಮ ವಿಚಾರಿಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಈ ಕಷ್ಟದ ಸಂದರ್ಭದಲ್ಲಿ ತಾವು ಹಾಗೂ ಪಕ್ಷ ಜೊತೆಗಿರುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಪ್ರಕೋಷ್ಠದ ಸಹ ಸಂಚಾಲಕ ಪ್ರಸನ್ನ ದರ್ಬೆ, ಪ್ರಮುಖರಾದ ಅಜಿತ್ ಹೊಸಮನೆ, ಪುತ್ತೂರು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆದೇಶ್ ಶೆಟ್ಟಿ, ಕಾರ್ಯದರ್ಶಿ ಪ್ರೀತಂ ಪೆರ್ನೆ, ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ರಾಜೇಶ್, ವಿಶ್ವನಾಥ್ ಕುಲಾಲ್ ಸೇರಿದಂತೆ ಹಲವು ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Latest News

error: Content is protected !!