Friday, November 20, 2026
Homeಕರಾವಳಿಮಂಗಳೂರು ಮೆಡಿಕಲ್ ಕಾಲೇಜು ಆವರಣದಲ್ಲಿ ಕುಟುಂಬಸ್ಥರಿಂದಲೇ ವಿದ್ಯಾರ್ಥಿನಿಯ ಕಿಡ್ನಾಪ್!; ಥಾರ್‌ ಜೀಪ್‌ನಲ್ಲಿ ಬಲವಂತವಾಗಿ ಎಳೆದೊಯ್ದ ಯುವಕರು

ಮಂಗಳೂರು ಮೆಡಿಕಲ್ ಕಾಲೇಜು ಆವರಣದಲ್ಲಿ ಕುಟುಂಬಸ್ಥರಿಂದಲೇ ವಿದ್ಯಾರ್ಥಿನಿಯ ಕಿಡ್ನಾಪ್!; ಥಾರ್‌ ಜೀಪ್‌ನಲ್ಲಿ ಬಲವಂತವಾಗಿ ಎಳೆದೊಯ್ದ ಯುವಕರು

- Advertisement -
- Advertisement -

ಮಂಗಳೂರು: ಹಾಡಹಗಲೇ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿಯೊಬ್ಬಳನ್ನು ಹಲವು ವ್ಯಕ್ತಿಗಳು ಬಲವಂತವಾಗಿ ಎಳೆದೊಯ್ದು ಥಾರ್‌ ಜೀಪ್‌ನಲ್ಲಿ ಅಪಹರಿಸಿರುವ ಆಘಾತಕಾರಿ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಕಣಚೂರು ಮೆಡಿಕಲ್ ಕಾಲೇಜಿನ ಆವರಣದಲ್ಲಿ ನಡೆದ ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅಪಹರಣಕ್ಕೊಳಗಾದ ಯುವತಿ ಮುಸ್ಲಿಂ ಸಮುದಾಯಕ್ಕೆ ಸೇರಿದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದು, ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಆಕೆಯ ಕುಟುಂಬಸ್ಥರೇ ಕಾಲೇಜಿಗೆ ಬಂದು ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲವು ವ್ಯಕ್ತಿಗಳು ಸೇರಿ ವಿದ್ಯಾರ್ಥಿನಿಯನ್ನು ಎಳೆದುಕೊಂಡು ಹೋಗಿ ಥಾರ್‌ ವಾಹನದಲ್ಲಿ ಕರೆದೊಯ್ಯುತ್ತಿರುವ ದೃಶ್ಯಗಳು ವೈರಲ್ ಆಗಿರುವ ವಿಡಿಯೋದಲ್ಲಿ ಸೆರೆಯಾಗಿವೆ.

- Advertisement -

Latest News

error: Content is protected !!