Monday, June 8, 2026
Homeಅಪರಾಧಜಾಗದ ವಿಚಾರದಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ; ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ...

ಜಾಗದ ವಿಚಾರದಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ; ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ಹೊಸಂಗಡಿ ಗ್ರಾಮದ ನಿವಾಸಿ ಅಕ್ಷತಾ (34) ಅವರು ಗಂಡನಿಗೆ ಜಾಗದ ವಿಚಾರದಲ್ಲಿ ಆರೋಪಿಗಳು ಮನೆಗೆ ಬಂದು ಜೀವ ಬೆದರಿಕೆ ಹಾಕಿ ಅವ್ಯಾಚವಾಗಿ ಬೈದಿರುವುದರ ಕುರಿತು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣದ ದೂರುದಾರರಾದ ಬೆಳ್ತಂಗಡಿ ನಿವಾಸಿ ಅಕ್ಷತಾ (34) ಎಂಬವರ ದೂರಿನಂತೆ, ಆರೋಪಿ ವಿಠಲ ಸಿ ಪೂಜಾರಿ ಎಂಬವರ ಪ್ರಚೋದನೆಯಿಂದ, 2 ನೇ ಮತ್ತು 3ನೇ ಆರೋಪಿಗಳಾದ ಪ್ರಸಾದ್ ಪೂಜಾರಿ, ಉದಯ ಪೂಜಾರಿ ಎಂಬವರುಗಳು, ದಿನಾಂಕ: 08.12.2023 ರಂದು ರಾತ್ರಿ ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಹಲಕ್ಕೆ ಎಂಬಲ್ಲಿ ಫಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಫಿರ್ಯಾದಿದಾರರಲ್ಲಿ ಆಕೆಯ ಗಂಡನನ್ನು ವಿಚಾರಿಸಿ, ಆತನು ಜಾಗದ ವಿಚಾರದಲ್ಲಿ ಆರೋಪಿಗಳ ತಂಟೆಗೆ ಬಂದಲ್ಲಿ ಆತನನ್ನು ಜೀವಸಹಿತ ಬದುಕಲು ಬಿಡುವುದಿಲ್ಲ ಎಂದು ಬೈದು ಜೀವ ಬೆದರಿಕೆ ಹಾಕಿ ಅವ್ಯಾಚವಾಗಿ ಬೈದಿರುವುದಾಗಿ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 78/2023 ಕಲಂ: 447,504,509,506,109 ಜೊತೆಗೆ 34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!