Friday, May 3, 2024
Homeಅಪರಾಧಚಾಲಕ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್; ಸ್ನೇಹಿತನ ಪತ್ನಿ ಜೊತೆ ಅನೈತಿಕ ಸಂಬಂಧಕ್ಕೆ ಕೊಲೆ; ಕೊಲೆ ಮಾಡಿ...

ಚಾಲಕ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್; ಸ್ನೇಹಿತನ ಪತ್ನಿ ಜೊತೆ ಅನೈತಿಕ ಸಂಬಂಧಕ್ಕೆ ಕೊಲೆ; ಕೊಲೆ ಮಾಡಿ ಆಗುಂಬೆ ಘಾಟ್ ಗೆ ಶವ ಬಿಸಾಕಿದ ಇಬ್ಬರು ಅಂದರ್

spot_img
- Advertisement -
- Advertisement -

ಪುತ್ತೂರು : ಜೆಸಿಬಿ ಚಾಲಕನೊಬ್ಬನ ನಾಪತ್ತೆ ಪ್ರಕರಣವನ್ನು ಕೆಲ ದಿನಗಳ ಬಳಿಕ ಭೇದಿಸಿದ್ದು‌. ಅನೈತಿಕ ಸಂಬಂಧಕ್ಕೆ ಕೊಲೆ ಮಾಡಿ ನಂತರ ಆಗುಂಬೆ ಘಾಟ್ ನಲ್ಲಿ ಶವ ಬಿಸಾಕಿದ ಮೂವರು ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸುವಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣದ ವಿವರ: ಬಾಗಲಕೋಟೆ ಜಿಲ್ಲೆಯ ಬಾದಾಮಿ ಮೂಲದ ನಿವಾಸಿಗಳಾದ ಸುರೇಶ ಹಾಗೂ ರೇಣವ್ವ ದಂಪತಿಗಳ ಪುತ್ರ, ಪ್ರಸ್ತುತ ಕುಂಬ್ರದ ಮೋಹನ್ ದಾಸ್ ರೈ ಅವರ ಬಳಿ ಜೆಸಿಬಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಹನುಮಂತ(22) ಎಂಬಾತ ನ.17 ರಂದು ನಾಪತ್ತೆಯಾಗಿರುವ ಬಗ್ಗೆ ಹುಡುಕಾಟ ನಡೆಸಿದ್ದು ಬಳಿಕ ಈ ಬಗ್ಗೆ ನಾಪತ್ತೆ ಪ್ರಕರಣ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನ.20 ರಂದು ನಾಪತ್ತೆಯಾಗದ ಯುವಕನ ತಾಯಿ ರೇಣಮ್ವ ಎಂಬವರು ಮೂವರು ಸ್ನೇಹಿತರಾದ ಶೀವಪ್ಪ, ಮಂಜುನಾಥ, ದುರ್ಗಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದರು‌. ಈ ಬಗ್ಗೆ ತನಿಖೆ ನಡೆಸಿದಾಗ ಕೊಲೆ ಮಾಡಿ ಆಗುಂಬೆ ಘಾಟ್ ನಲ್ಲಿ ಬಿಸಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಮೂವರಲ್ಲಿ ಇಬ್ಬರನ್ನು ಬಂಧಿಸಿದ್ದು. ಮತ್ತೊಬ್ಬನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ದೂರಿನ ಸಾರಾಂಶ: ಹನುಮಂತ ಮಾದ ರವರ ಮಗ ಶಿವಪ್ಪ ಮಾದರ ಎಂಬಾತನು ರೇಣವ್ವ ರವರ ತಮ್ಮನಾದ ಮಂಜುನಾಥರ ಬಳಿ, ‘ನಿನ್ನ ಅಕ್ಕನ ಮಗ ಹನುಮಂತ ನನ್ನ ಹೆಂಡತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ಅವನನ್ನು ಎಲ್ಲಿಗಾದರು ಕಳಿಸು’ ಎಂದು ಹೇಳಿದ್ದು, ಅದರಂತೆ ಹನುಮಂತನನ್ನು ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರಿನ ಕುಂಬ್ರದಲ್ಲಿರುವ ಗೆಳೆಯ ಸಂತೋಷ ಗದ್ದಿಗೌಡನ ಹತ್ತಿರ ಕಳಿಸಿದ್ದು, ಈ ಬಗ್ಗೆ ರೇಣವ್ವರಿಗೆ ತಮ್ಮ ಮಂಜುನಾಥ ಪೋನ್ ಕರೆ ಮೂಲಕ ತಿಳಿಸಿದ್ದು, ನ.17 ರಂದು ಮಧ್ಯಾಹ್ನ ಶಿವಪ್ಪನು ಮಂಜುನಾಥನಿಗೆ ಕರೆ ಮಾಡಿ ನಿನ್ನ ಅಕ್ಕನ ಮಗ ಸಿಕ್ಕಿದರೆ ಖಂಡಿತ ಬಿಡುವುದಿಲ್ಲ ಎಂದು ಹೇಳಿ ಅದೇ ದಿನ ಸಂಜೆ ರೇಣವ್ವ ಕುಂಬ್ರದ ಸಂತೋಷನಿಗೆ ಕರೆ ಮಾಡಿದಾಗ, ಶಿವಪ್ಪ, ಹನುಮಪ್ಪ ಮಾದರ, ಮಂಜುನಾಥ ಹನುಮಪ್ಪ ಮಾದರ ಮತ್ತು ದುರ್ಗಪ್ಪ ಮಾದರ ರವರು ವಾಹನದಲ್ಲಿ ಬಂದು ಕುಂಬ್ರದಲ್ಲಿರುವ ನನ್ನ ರೂಮ್ ನಿಂದ ಹನುಮಂತ ನನ್ನು ಪುತ್ತೂರು ಕಡೆಗೆ ಕರೆದುಕೊಂಡು ಹೋಗಿರುವುದಾಗಿ ಸಂತೋಷ ತಿಳಿಸಿದ್ದು, ಕೂಡಲೇ ರೇಣವ್ವ ತಮ್ಮ ಮಂಜುನಾಥನು ವಿಷಯ ತಿಳಿಸಿದ್ದು, ಹನುಮಂತನಿಗೂ ಹಾಗೂ ಶಿವಪ್ಪ, ಮಂಜುನಾಥ, ದುರ್ಗಪ್ಪ ರವರಿಗೂ ಪೋನ್ ಕರೆ ಮಾಡಿದಾಗ ಅವರುಗಳ ಮೊಬೈಲ್ ಸ್ವಿಚ್ ಆಪ್ ಆಗಿದ್ದು, ನಂತರ ರೇಣವ್ವ ಮಗ ಮನೆಗೂ ಬಾರದೇ ಪೋನ್ ಕರೆಗೂ ಸಿಗದೇ ನಾಪತ್ತೆಯಾಗಿರುವುದಾಗಿ ತಿಳಿಸಿದ್ದರು.

ಅನೈತಿಕ ಸಂಬಂಧ ಕೊಲೆ ಕಾರಣ: ಪುತ್ತೂರು ಗ್ರಾಮಾಂತರ ಪೊಲೀಸರು A-1 ಆರೋಪಿ ಶಿವಪ್ಪ(42) ಮತ್ತು A-2 ಆರೋಪಿ ಮಂಜುನಾಥ(32)ನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶಿವಪ್ಪನ ಹೆಂಡತಿ ಜೊತೆ ಹನುಮಂತನಿಗೆ ಅಕ್ರಮ ಸಂಬಂಧ ಇರುವ ಬಗ್ಗೆ ಸಂಶಯವಿದ್ದ ಕಾರಣ ಹನುಮಂತನನ್ನು ಕೊಲೆ ಮಾಡಿ ನಂತರ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಆಗುಂಬೆ ಘಾಟ್ ಪ್ರದೇಶದ ಮೂರನೇ ತಿರುವಿನಲ್ಲಿ ಟಾಟಾ ಏಸ್ ವಾಹನದಲ್ಲಿ ತೆಗೆದುಕೊಂಡು ಹೋಗಿ ಬಿಸಾಕಿರುವ ಬಗ್ಗೆ ಬಾಯಿಬಿಟ್ಟಿದ್ದರು. ಮೂರನೇ ಆರೋಪಿ ದುರ್ಗಪ್ಪ ಟಾಟಾ ಏಸ್ ವಾಹನ ಸಮೇತ ನಾಪತ್ತೆಯಾಗಿದ್ದು ಆತನಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ. ಪ್ರಕರಣದ ಆರೋಪಿಗಳು ಮತ್ತು ಕೊಲೆಯಾದ ಹನುಮಂತ ಕುಟುಂಬದವರು ಒಂದೇ ಊರಿನವರಾಗಿದ್ದು. ಒಬ್ಬರಿಗೊಬ್ಬರು ಪರಿಚಯಸ್ಥರು ಎನ್ನಲಾಗಿದೆ.

ಆಗುಂಬೆ ಘಾಟ್ ನಲ್ಲಿ ಶವ ಪತ್ತೆ: ಪುತ್ತೂರು ಗ್ರಾಮಾಂತರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಏಂಟು ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಡಿ.9 ರಂದು ಶವ ಬಿಸಾಕಿದ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಆಗುಂಬೆ ಮೂರನೇ ತಿರುವಿನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಸ್ಥಳವನ್ನು ಪತ್ತೆ ಹಚ್ಚಿ ನಂತರ ಮಂಗಳೂರು ದೇರಳಕಟ್ಟೆ ವೈದ್ಯರಿಂದ ಸ್ಥಳದಲ್ಲಿಯೇ ಶವಪರೀಕ್ಷೆ ಮಾಡಿಸಿ ನಂತರ ಆಗುಂಬೆ ಶವಗಾರದಲ್ಲಿ ಪೊಲೀಸರು ದಫನ ಮಾಡಿದ್ದಾರೆ‌. ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪೊಲೀಸ್ ಕೋರ್ಟ್ ನಿಂದ ಅನುಮತಿ ಪಡೆದು ಬದಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ‌.

- Advertisement -
spot_img

Latest News

error: Content is protected !!