Sunday, June 7, 2026
Homeಕರಾವಳಿಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಕ್ರೀಡೋತ್ಸವ;ಮುಖ್ಯ ಅತಿಥಿಯಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭಾಗಿ

ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಕ್ರೀಡೋತ್ಸವ;ಮುಖ್ಯ ಅತಿಥಿಯಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭಾಗಿ

- Advertisement -
- Advertisement -

ಬಂಟ್ವಾಳ: ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ವಾರ್ಷಿಕ ಕ್ರೀಡೋತ್ಸವ ಜರುಗಿತು. ‌ಮುಖ್ಯ ಅತಿಥಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ ಹಿಂದೆ ಪ್ರಭಾಕರ್ ಭಟ್ ಅವರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಈ‌ ಕಾರ್ಯಕ್ರಮಕ್ಕೆ ನಾನು ಬಾರದೇ ಇದ್ದಿದ್ದರೆ ನನ್ನ ಜೀವನದ ದೊಡ್ಡ ನಷ್ಟವಾಗುತ್ತಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ, ಕುಮಾರಸ್ವಾಮಿ ಹಿಂದೆ ಒಂದು ರೀತಿ ಮಾತನಾಡುತ್ತಿದ್ದರು, ಈಗ ಕಾರ್ಯಕ್ರಮ ಭಾಗವಹಿಸಿದ್ದಾರಲ್ಲಾ ಅಂತ ಯೋಚಿಸಿರಬಹುದು, ಆದರೆ ನನಗೆ ಕೆಲವರು ದಾರಿ ತಪ್ಪಿಸುವಂತಹ ಮಾಹಿತಿ ನೀಡಿದ್ದರು ಎಂದು ಹೇಳಿದರು.

ಇಂದು ನನ್ನ ಕಣ್ಣು ತೆರೆಯಲ್ಪಟ್ಟಿದ್ದು ನನ್ನಲ್ಲಿ ತಪ್ಪುಗಳಾಗಿದ್ದು ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ ಕುಮಾರಸ್ವಾಮಿ
ಭಾಷಣದ ಅಂತ್ಯದಲ್ಲಿ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದರು.

- Advertisement -

Latest News

error: Content is protected !!