Friday, May 3, 2024
Homeಅಪರಾಧಖೋಟ ನೋಟು ಪ್ರಕರಣದಲ್ಲಿ ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರ ಬಂಧನ

ಖೋಟ ನೋಟು ಪ್ರಕರಣದಲ್ಲಿ ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರ ಬಂಧನ

spot_img
- Advertisement -
- Advertisement -

ಬೆಳ್ತಂಗಡಿ: ಖೋಟ ನೋಟು ಪ್ರಕರಣದಲ್ಲಿ ಹಲವಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಧರ್ಮಸ್ಥಳ ಪೊಲೀಸರು ದಸ್ತಗಿರಿ ಮಾಡಿ ಬೆಳ್ತಂಗಡಿ ನ್ಯಾಯಾಲಕ್ಕೆ ಹಾಜರಾಪಡಿಸಿದ್ದಾರೆ. 

ಧರ್ಮಸ್ಥಳ ಠಾಣಾ ಅ.ಕ್ರ 21/2016 (ಖೋಟ ನೋಟು) ಪ್ರಕರಣದಲ್ಲಿ, ಮಾನ್ಯ ನ್ಯಾಯಾಲಯವು ಆರೋಪಿಗಳಾದ ಮೋಹನ ಕುಮಾರ್ ಹಾಗೂ ಕೆಂಪರಾಜ್ ಬಂಧನಕ್ಕೆ ಪ್ರೊಕ್ಲಮೇಷನ್ ಹೊರಡಿಸಿ, ಆಸ್ತಿ ಜಪ್ತಿ ವಾರಂಟ್ ಹೊರಡಿಸಿದರು ಸಿಗದೇ ಇದ್ದು ತಲೆಮರೆಸಿಕೊಂಡಿದ್ದರು. 

ಇದೀಗ ಧರ್ಮಸ್ಥಳ ಪೊಲೀಸರು ಆರೋಪಿ ಚಿಕ್ಕನಾಯಕನಹಳ್ಳಿ ತುಮಕೂರು ಜಿಲ್ಲೆಯ ದೇವಾಂಗ ಬೀದಿ ಮನೆಯ  A1.ಮೋಹನ ಕುಮಾರ್, ಸುಮಾರು 7 ವರ್ಷದಿಂದ ಚಿಕ್ಕನಾಯಕನಹಳ್ಳಿ ಊರುಬಿಟ್ಟು ತಲೆಮರೆಸಿಕೊಂಡಿದ್ದವನ ಬಗ್ಗೆ ತಾಂತ್ರಿಕ ಮಾಹಿತಿ ಮುಖೇನ ಬೆಂಗಳೂರಿನಲ್ಲಿ ಇರುವ  ಮಾಹಿತಿ ಕಲೆ ಹಾಕಿ ನಿನ್ನೆ ದಿನ  ಬೆಂಗಳೂರು ಗೊಲ್ಲಹಳ್ಲಿ ಬಸ್ಸು ತಂಗುದಾಣದ ಬಳಿಯಲ್ಲಿ ಬಂಧಿಸಿದ್ದಾರೆ. ಹಾಗೆಯೇ ಇನ್ನೋರ್ವ ಆರೋಪಿ ಚಿಕ್ಕನಾಯಕನಹಳ್ಳಿ ತುಮಕೂರು ಜಿಲ್ಲೆಯ ಜೋಗಿ ಹಳ್ಳಿ ಗೇಟ್ ಮನೆಯ A3 ಕೆಂಪರಾಜ್, ಸುಮಾರು 4 ವರ್ಷ ದಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದು, ಈತನ ಬಗ್ಗೆ ಮಾಹಿತಿ ಕಲೆ ಹಾಕಿ ನಿನ್ನೆ ದಿನ ಚಿಕ್ಕನಾಯಕನಹಳ್ಳಿ ತಾಲೂಕು ಮುಳಬಾಗಿಲು ಬಸ್ಸು ತಂಗುದಾಣದ ಬಳಿಯಲ್ಲಿ ಬಂಧಿಸಿದ್ದಾರೆ.

ಮಾನ್ಯ ಪೊಲೀಸು ಉಪಾಧೀಕ್ಷಕರು ಬಂಟ್ವಾಳ ಉಪವಿಭಾಗ ಹಾಗೂ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರು ನಾಗೇಶ್ ಕದ್ರಿ ಹಾಗೂ ಧರ್ಮಸ್ಥಳ ಪಿ.ಎಸ್.ಐ ಅನಿಲ್ ಕುಮಾರ್ (ಕಾ & ಸು) ರವರ ಮಾಗ೯ದಶ೯ನದಂತೆ ಧಮ೯ಸ್ಥಳ ಠಾಣಾ ( ಕ್ರ್ಯೆಂ) ಪಿ.ಎಸ್.ಐ ಸಮರ್ಥ ಆರ್ ಗಾಣಿಗೇರ್,  ಹೆಚ್ ಸಿ ರಾಜೇಶ್ ಎನ್,  ವಿನಯ ಕುಮಾರ್ ರವರು ಆರೋಪಿಗಳನ್ನು ದಸ್ತಗಿರಿ ಮಾಡಿ ಮಾನ್ಯ ಬೆಳ್ತಂಗಡಿ ACJ JMFC ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ದಿನಾಂಕ 21-12-2023 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -
spot_img

Latest News

error: Content is protected !!