Friday, May 3, 2024
Homeಅಪರಾಧನಿರ್ಲಕ್ಷತನದಿಂದ ಕೆಎಸ್​ಆರ್​ಟಿಸಿ ಬಸ್ಸು ಚಲಾಯಿಸಿದ ಚಾಲಕ; ಹಿಂಬದಿಯ ಎಡಬದಿ ಟಯರ್‌ ಏಕಾಏಕಿ ಹೊಡೆದ ಪರಿಣಾಮ ಗಾಯಗೊಂಡ...

ನಿರ್ಲಕ್ಷತನದಿಂದ ಕೆಎಸ್​ಆರ್​ಟಿಸಿ ಬಸ್ಸು ಚಲಾಯಿಸಿದ ಚಾಲಕ; ಹಿಂಬದಿಯ ಎಡಬದಿ ಟಯರ್‌ ಏಕಾಏಕಿ ಹೊಡೆದ ಪರಿಣಾಮ ಗಾಯಗೊಂಡ ಪ್ರಯಾಣಿಕ

spot_img
- Advertisement -
- Advertisement -

ಬೆಳ್ತಂಗಡಿ: ಮಳವಳ್ಳಿ ತಾಲೂಕು ಕೊಡಿಪೂರ ಗ್ರಾಮದ ಕಸಬಾ ಹೋಬಳಿಯ ಸಿದ್ದರಾಜು(37) ಅವರು ನೀಡಿದ ದೂರಿನಂತೆ KSRTC ಬಸ್ಸಿನ ಚಾಲಕನು ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ನಿರ್ಲಕ್ಷ್ಯತನದಿಂದ ಚಲಾಯಿಸಿದರ ಕುರಿತು ಪ್ರಕರಣವು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಪ್ರಕರಣದ ದೂರುದಾರರಾದ ಮಂಡ್ಯ ನಿವಾಸಿ ಮಳವಳ್ಳಿ ತಾಲೂಕು ಕೊಡಿಪೂರ ಗ್ರಾಮದ ಕಸಬಾ ಹೋಬಳಿಯ ಸಿದ್ದರಾಜು ಎಂಬವರ ದೂರಿನಂತೆ, ದಿನಾಂಕ: 08-12-2023 ರಂದು ಮದ್ಯಾಹ್ನ ಸಮಯ ಪಿರ್ಯಾಧಿದಾರರು ಅವರ ಸ್ನೇಹಿತ ರಾಜು S ಎಂಬವರೊಂದಿಗೆ KA 19 F 3146 ನೇ KSRTC ಬಸ್ಸಿನಲ್ಲಿ ಪ್ರಯಾಣಿಕರಾಗಿ ಕುಳಿತುಕೊಂಡು, ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮದ ಪಾರ್ಪಿಕಲ್ಲು ಎಂಬಲ್ಲಿ ತಲುಪಿದಾಗ ಬಸ್ಸಿನ ಚಾಲಕನು ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಬಸ್ಸಿನ ಹಿಂಬದಿಯ ಎಡಬದಿ ಟಯರ್‌ ಏಕಾಏಕಿ ಹೊಡೆದು ಮಡ್‌ ಗಾರ್ಡ್‌ ಕವರ್‌ ಮೇಲಕ್ಕೆ ಬಂದು ಸೀಟಿನಲ್ಲಿ ಕುಳಿತಿದ್ದ ರಾಜು ಎಸ್ ಎಂಬವರ ಬಲ ಕಾಲಿಗೆ ತಾಗಿ ಅವರು ಬಲಕಾಲಿನ ಕೋಲು ಕಾಲಿಗೆ ಮೂಳೆಮುರಿತದ ಗಾಯಗೊಂಡು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬುವುದನ್ನು ದೂರಿನ್ಲಲಿ ತಿಳಿಸಲಾಗಿದೆ.

ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 115/2023 ಕಲಂ: 279,338,ಭಾ.ದಂ.ಸಂ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -
spot_img

Latest News

error: Content is protected !!