Thursday, June 4, 2026
Homeಕರಾವಳಿಕರ್ನಾಟಕದಲ್ಲಿ ಮತ್ತೆ ಒಂದೇ ದಿನ ಸಾವಿರದ ಗಡಿ ದಾಟಿದ ಕೋವಿಡ್: ದಕ್ಷಿಣ ಕನ್ನಡದಲ್ಲಿ 9, ಉಡುಪಿಯಲ್ಲಿ...

ಕರ್ನಾಟಕದಲ್ಲಿ ಮತ್ತೆ ಒಂದೇ ದಿನ ಸಾವಿರದ ಗಡಿ ದಾಟಿದ ಕೋವಿಡ್: ದಕ್ಷಿಣ ಕನ್ನಡದಲ್ಲಿ 9, ಉಡುಪಿಯಲ್ಲಿ 7 ಪ್ರಕರಣಗಳು ದೃಢ

- Advertisement -
- Advertisement -

ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಬುಧವಾರ 1,231 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಕೆಲವು ದಿನಗಳಿಂದ ಸಾವಿರಕ್ಕೂ ಕಡಿಮೆ ಪ್ರಕರಣಗಳು ಪ್ರತಿ ದಿನ ರಾಜ್ಯದಲ್ಲಿ ವರದಿಯಾಗುತ್ತಿದ್ದವು. ಬುಧವಾರ ಕೊರೊನಾ ವೈರಸ್ ಸೋಂಕಿತರ ದೈನಂದಿನ ಸಂಖ್ಯೆಯಲ್ಲಿ ದಿಢೀರ್ ಏರಿಕೆ ದಾಖಲಾಗಿದೆ.

ಬುಧವಾರ ಒಟ್ಟು 1,231 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗುವ ಮೂಲಕ, ಕರ್ನಾಟಕ ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 39,81,816 ಕ್ಕೆ ಏರಿಕೆಯಾಗಿದೆ. ಬುಧವಾರ ಕೂಡಾ 1,047 ಕೋವಿಡ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯಾದ್ಯಂತ ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 39,35,088ಕ್ಕೆ ಏರಿಕೆ ಕಂಡಿದೆ.

ಸದ್ಯ ರಾಜ್ಯಾದ್ಯಂತ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 6,603ಕ್ಕೆ ಏರಿಕೆ ಕಂಡಿದೆ. ಅದೃಷ್ಟವಶಾತ್, ರಾಜ್ಯದಲ್ಲಿ ಬುಧವಾರ ಕೋವಿಡ್ ಸೋಂಕಿತರು ಯಾರು ಸಾವನ್ನಪ್ಪಿಲ್ಲ. ಆದರೆ, ರಾಜ್ಯಾದ್ಯಂತ ಇಲ್ಲಿಯವರೆಗೆ ಕೋವಿಡ್‌ಗೆ ಬಲಿಯಾದವರ ಒಟ್ಟು ಸಂಖ್ಯೆ 40,083ಕ್ಕೆ ಏರಿಕೆಯಾಗಿದೆ. ಇನ್ನು ದಕ್ಷಿಣ ಕನ್ನಡದಲ್ಲಿ 09, ಉಡುಪಿಯಲ್ಲಿ ತಲಾ 07, ಪ್ರಕರಣಗಳು ಬುಧವಾರ ದೃಢಪಟ್ಟಿವೆ.

- Advertisement -

Latest News

error: Content is protected !!