Saturday, October 17, 2026
Homeಕರಾವಳಿಬೆಳ್ತಂಗಡಿ:  ಬೆಳಾಲು ಹಾಗೂ ಬೈಪಾಡಿಯಲ್ಲಿ ಹಲವು ಮಂದಿ ಕಾಂಗ್ರೆಸ್‌ ಪ್ರಮುಖರು ಬಿಜೆಪಿ ‌ಸೇರ್ಪಡೆ

ಬೆಳ್ತಂಗಡಿ:  ಬೆಳಾಲು ಹಾಗೂ ಬೈಪಾಡಿಯಲ್ಲಿ ಹಲವು ಮಂದಿ ಕಾಂಗ್ರೆಸ್‌ ಪ್ರಮುಖರು ಬಿಜೆಪಿ ‌ಸೇರ್ಪಡೆ

- Advertisement -
- Advertisement -

ಬೆಳ್ತಂಗಡಿ:ಬೆಳಾಲು ಗ್ರಾಮ 178 ಬೂತ್ ನ ಕಾಂಗ್ರೆಸ್ ‌ಬೂತ್ ಅಧ್ಯಕ್ಷರಾದ ಕೇಶವ‌ ಕರ್ಪುದಗುಡ್ಡೆ, ಪ್ರಮುಖರಾದ ಯಶೋಧರ ಗೌಡ ಅಳಕೆದಡ್ಡ,ಸಂತೋಷ್ ಮಡಿವಾಳ,ದಿನೇಶ್ ಗೌಡ ಕರ್ಪುದಗುಡ್ಡೆ,ಪ್ರವೀಣ್,ಉಪೇಂದ್ರ‌‌ ಕರ್ಪುದಗುಡ್ಡೆ,ಪ್ರಭಾಕರ ಗೌಡ ಹೊಂಪೆಜಾಲು ಇವರನ್ನು ಶಾಸಕ ಹರೀಶ್ ಪೂಂಜರ ಸಮ್ಮುಖದಲ್ಲಿ ‌ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.

ಇದೇ ಸಂದರ್ಭದಲ್ಲಿ ಅಭ್ಯರ್ಥಿ ಪ್ರಮುಖ್ ಜಯಾನಂದ ಗೌಡ, ಉದಿತ್ ಕುಮಾರ್ ಜೈನ್ ಕುಜುಂಬೊಟ್ಟು, ದಿಲೀಪ್ ಕುಮಾರ್ ಜೈನ್, ವಕೀಲರಾದ ಶ್ರೀನಿವಾಸ್ ಗೌಡ,ಪ್ರಮುಖರಾದ ಸುರೇಂದ್ರ ಗೌಡ, ದಿನೇಶ್ ಗೌಡ ಧರ್ಮದೋಡಿ, ಯಶವಂತ ಗೌಡ ಬನಂದೂರು,ಶ್ರೀಮತಿ ವಿದ್ಯಾಶ್ರೀನಿವಾಸ ಗೌಡ,ಯಶೋದ, ಹರಿಪ್ರಸಾದ್ ಅರಣೆಮಾರು, ಕುಂಞಪ್ಪ ನಾಯ್ಕ, ಜಯಾನಂದ ನಾಯ್ಕ ಉಪಸ್ಥಿತರಿದ್ದರು.

ಇನ್ನು ಬೆಳಾಲು ಬೈಪಾಡಿಯಲ್ಲೂ ಶಾಸಕ ಹರೀಶ್ ಪೂಂಜ ಅವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಬೆಳಾಲು ಬೂತ್ ಸಮಿತಿ ಅಧ್ಯಕ್ಷ ಕೇಶವ ಗೌಡ, ಕಾರ್ಯಕರ್ತರಾದ ಸಂತೋಷ್ ಮಡಿವಾಳ, ಪ್ರಭಾಕರ್ ಗೌಡ, ದಿನೇಶ್, ಪ್ರವೀಣ್, ಉಪೇಂದ್ರ ಹಾಗೂ ಬೈಪಾಡಿಯ ಕಾಂಗ್ರೆಸ್ ಕಾರ್ಯಕರ್ತರಾದ ದಿವಾಕರ್ ಗೌಡ,ಚೆನ್ನಕೇಶವ,ನೇಮಣ್ಣ ಗೌಡ ಅವರು ಬಿಜೆಪಿ ಸೇರ್ಪಡೆಯಾದರು.

- Advertisement -

Latest News

error: Content is protected !!