Thursday, June 4, 2026
Homeಅಪರಾಧಅಸ್ಸಾಂ: ಬರ್ಮಾ ಅಡಿಕೆ ಅಕ್ರಮವಾಗಿ ಆಮದಿಗೆ ತಡೆ- 24 ಗಂಟೆಗಳಲ್ಲಿ 21 ಮಂದಿ ಅರೆಸ್ಟ್

ಅಸ್ಸಾಂ: ಬರ್ಮಾ ಅಡಿಕೆ ಅಕ್ರಮವಾಗಿ ಆಮದಿಗೆ ತಡೆ- 24 ಗಂಟೆಗಳಲ್ಲಿ 21 ಮಂದಿ ಅರೆಸ್ಟ್

- Advertisement -
- Advertisement -

ಅಸ್ಸಾಂ: ಅಕ್ರಮ ಅಡಿಕೆ ಸಾಗಾಟ ಪ್ರಕರಣದ ಬಗ್ಗೆ ಹೈಲಕಂಡಿ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಉಪಾಧ್ಯಾಯ ಮಾಧ್ಯಮಗಳಿಗೆ ಮಾಹಿತಿ ನೀಡಿ, 1,700 ಕ್ವಿಂಟಾಲ್ ಬರ್ಮಾ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.

24 ಗಂಟೆಗಳಲ್ಲಿ ಹೈಲಕಂಡಿ ಜಿಲ್ಲೆಯಾದ್ಯಂತ ದಾಳಿ ನಡೆಸಲಾಗಿದ್ದು ಅಡಿಕೆಯ ಎಲ್ಲಾ ಗೋದಾಮುಗಳನ್ನು ಸೀಲ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಸೀಲ್ ಮಾಡಲಾಗಿರುವ ಗೋದಾಮುಗಳಲ್ಲಿ ಬರ್ಮಾ ಅಡಿಕೆ ಅಕ್ರಮವಾಗಿ ಆಮದಾಗಿ ಬಳಿಕ ಅಲ್ಲಿ ಅಡಿಕೆಯ ವಿಲೇವಾರಿ ಹಾಗೂ ಪ್ರತ್ಯೇಕಿಸುವ ಕೆಲಸ ನಡೆಯುತ್ತದೆ ಎನ್ನುವ ಮಾಹಿತಿ ಇದೆ ಎಂದು ಅವರು ತಿಳಿಸಿದ್ದಾರೆ.

ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಮತ್ತು ಪೊಲೀಸ್‌ ಪ್ರಧಾನ ಕಚೇರಿಯ ಸೂಚನೆಯಂತೆ ಎಲ್ಲಾ ರೀತಿಯ ಅಕ್ರಮ ವ್ಯಾಪಾರವನ್ನು ತಡೆಯಲು ದಾಳಿ ನಡೆಸಲಾಗುತ್ತಿದೆ ಎಂದು ಹೈಲಕಂಡಿ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಉಪಾಧ್ಯಾಯ ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!