Sunday, October 18, 2026
Homeತಾಜಾ ಸುದ್ದಿಸುಳ್ಯ: ರಿಕ್ಷಾಕ್ಕೆ ಕಾರು ಡಿಕ್ಕಿ- ರಿಕ್ಷಾ ಪಲ್ಟಿಯಾಗಿ ಇಬ್ಬರಿಗೆ ಗಾಯ..!

ಸುಳ್ಯ: ರಿಕ್ಷಾಕ್ಕೆ ಕಾರು ಡಿಕ್ಕಿ- ರಿಕ್ಷಾ ಪಲ್ಟಿಯಾಗಿ ಇಬ್ಬರಿಗೆ ಗಾಯ..!

- Advertisement -
- Advertisement -

ಸುಳ್ಯ: ಓವರ್ ಟೇಕ್ ಭರದಲ್ಲಿ ಎದುರಿನಿಂದ ಬರುತ್ತಿದ್ದ ರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲೇ ರಿಕ್ಷಾ ಪಲ್ಟಿಯಾಗಿ ಇಬ್ಬರು ಗಾಯಗೊಂಡ ಘಟನೆ ಸುಳ್ಯ ಜಾಲ್ಸುರು ಗ್ರಾಮದ ಕಾಳಮ್ಮನೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಗಾಯಗೊಂಡವರನ್ನು ಪೈಚಾರಿನ ಉಮೇಶ್ ಗೌಡ ಹಾಗೂ ರಾಘವೇಂದ್ರ ಎಂದು ಗುರುತಿಸಲಾಗಿದೆ.

ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು, ಅತೀ ವೇಗವಾಗಿ ಬಂದು ಮುಂದಿದ್ದ ಬಸ್ಸನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಅಟೋರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು.

ಪರಿಣಾಮ ರಿಕ್ಷಾ ಪಲ್ಟಿಯಾಗಿದ್ದು, ಈ ವೇಳೆ ರಿಕ್ಷಾದಲ್ಲಿದ್ದ ಇಬ್ಬರಿಗೆ ಗಾಯವಾಗಿದೆ. ತಕ್ಷಣ ಅವರಿಬ್ಬರನ್ನು ಸ್ಥಳೀಯರು ಸೇರಿ ಇನ್ನೊಂದು ಅಟೋರಿಕ್ಷಾದ ಮೂಲಕ ಸುಳ್ಯದ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

- Advertisement -

Latest News

error: Content is protected !!