Thursday, June 4, 2026
Homeಕರಾವಳಿಮಂಗಳೂರುಮೂಡಬಿದಿರೆ; ಅಕ್ರಮವಾಗಿ ಜಾನುವಾರುಗಳ ಸಾಗಾಟ: ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಮೂಡಬಿದಿರೆ; ಅಕ್ರಮವಾಗಿ ಜಾನುವಾರುಗಳ ಸಾಗಾಟ: ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮೂಡಬಿದಿರೆ; ಅಕ್ರಮವಾಗಿ ಜಾನುವಾರುಗಳ ಸಾಗಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮನ್ಸೂರ್ ಅದ್ಯಪಾಡಿ @ ಮೊಹಮ್ಮದ್ ಮನ್ಸೂರ್, ಮೊಹಮ್ಮದ್ ಅಶ್ಫಕ್, ಅಬ್ದುಲ್ ಮೊಹಮ್ಮದ್ ನಿಶಾಮ್ ಬಂಧಿತರು.

ಪ್ರಕರಣದ ವಿವರ;

ದಿನಾಂಕ: 15/10/2025 ರಂದು ಸಂಜೆ 5.00 ಗಂಟೆಗೆ ಮೂಡಬಿದ್ರೆ ತಾಲೂಕು ಹೊಸ್ಮಾರು ನೆಲ್ಲಿಕಾರು ಕಡೆಯಿಂದ ಆರೋಪಿಗಳಾದ ಮನ್ಸೂರ್ ಅದ್ಯಪಾಡಿ @ ಮೊಹಮ್ಮದ್ ಮನ್ಸೂರ್, ಮೊಹಮ್ಮದ್ ಅಶ್ಫಕ್, ಅಬ್ದುಲ್ ಮೊಹಮ್ಮದ್ ನಿಶಾಮ್ ಮತ್ತು ಇತರರು ಟಾಟಾ ಎಸಿ ಕಂಟೈನರ್ ವಾಹನವೊಂದರಲ್ಲಿ ಅಕ್ರಮವಾಗಿ 3 ಜಾನುವಾರುಗಳನ್ನು ಸಾಗಾಟ ಮಾಡಿಕೊಂಡು ಬರುತ್ತಿದ್ದ ಬಗ್ಗೆ ಮೂಡಬಿದರೆ ಪೊಲೀಸರಿಗೆ ಮಾಹಿತಿ ದೊರೆತಿದ್ದು ಅದರಂತೆ ದಾಳಿ ನಡೆಸಿದ ಪೊಲೀಸರು ಮನ್ಸೂರ್ ಅದ್ಯಪಾಡಿ @ ಮೊಹಮ್ಮದ್ ಮನ್ಸೂರ್, ಮೊಹಮ್ಮದ್ ಅಶ್ವದ್, ಮತ್ತು ಅಬ್ದುಲ್ ಮೊಹಮ್ಮದ್ ನಿಶಾಮ್ ಎಂಬುವರನ್ನು ಬಂಧಿಸಿದ್ದಾರೆ.

ಪ್ರಕರಣದ 1 ನೇ ಆರೋಪಿ ಮನ್ಸೂರ್ ಅದ್ಯಪಾಡಿ @ ಮೊಹಮ್ಮದ್ ಮನ್ಸೂರ್ ಮೇಲೆ ಒಟ್ಟು 29 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದು, ಇದು 30ನೇ ಪ್ರಕರಣವಾಗಿರುತ್ತದೆ. 2ನೇ ಆರೋಪಿ ಮೊಹಮ್ಮದ್ ಅಶ್ವಕ್ ನ ಮೇಲೆ ಉಳ್ಳಾಲದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಪ್ರಕರಣ ದಾಖಲಾಗಿದ್ದು, ಇದು 2ನೇ ಪ್ರಕರಣವಾಗಿರುತ್ತದೆ. ಹಾಗೂ 3ನೇ ಆರೋಪಿ ಅಬ್ದುಲ್ ಮೊಹಮ್ಮದ್ ನಿಶಾಮ್ ನ ವಿರುದ್ದ ಇದು ಮೊದಲನೇ ಪ್ರಕರಣವಾಗಿರುತ್ತದೆ. ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ ಪ್ರಕರಣದಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.

- Advertisement -

Latest News

error: Content is protected !!