Friday, June 5, 2026
Homeತಾಜಾ ಸುದ್ದಿಭೂ ವ್ಯಾಜ್ಯಕ್ಕೆ ಲಂಚ ಪಡೆದ ಆರೋಪ: ಎಸಿಬಿಯಿಂದ ಐಎಎಸ್ ಅಧಿಕಾರಿ ಮಂಜುನಾಥ್ ಅರೆಸ್ಟ್

ಭೂ ವ್ಯಾಜ್ಯಕ್ಕೆ ಲಂಚ ಪಡೆದ ಆರೋಪ: ಎಸಿಬಿಯಿಂದ ಐಎಎಸ್ ಅಧಿಕಾರಿ ಮಂಜುನಾಥ್ ಅರೆಸ್ಟ್

- Advertisement -
- Advertisement -

ಬೆಂಗಳೂರು: ಭೂ ವ್ಯಾಜ್ಯ ಸಂಬಂಧ ಲಂಚ ಪಡೆದ ಆರೋಪದಲ್ಲಿ ಐಎಎಸ್ ಅಧಿಕಾರಿ ಜೆ‌. ಮಂಜುನಾಥ್ ಬಂಧನವಾಗಿದೆ.

ಬೆಂಗಳೂರು ನಗರ ಡಿಸಿ ಆಗಿದ್ದ ವೇಳೆ ಲಂಚ ಆರೋಪದಲ್ಲಿ ಮಂಜುನಾಥ್ ಅವರನ್ನು ಎಸಿಬಿ ಅರೆಸ್ಟ್ ಮಾಡಿದೆ.

ಬೆಂಗಳೂರಿನ ಯಶವಂತಪುರದಲ್ಲಿರುವ ಮಂಜುನಾಥ ನಿವಾಸದಿಂದ ಎಸಿಬಿ ಡಿವೈಎಸ್ಪಿ ನೇತೃತ್ವದ ತಂಡ ಬಂಧಿಸಿದೆ.

ಪ್ರಕರಣದಲ್ಲಿ ಮಂಜುನಾಥ್ ಮೂರನೇ ಆರೋಪಿಯಾಗಿದ್ದು, ಬೆಂಗಳೂರು ನಗರ ಡಿಸಿಯಾಗಿದ್ದ ವೇಳೆ ಡಿಸಿ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿತ್ತು.

ಬಳಿಕ ಕೇಸ್ ರದ್ದುಗೊಳಿಸಲು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್ ತರಾಟೆಗೆತ್ತಿಕೊಂಡಿತ್ತು.

ಬಳಿಕ ರಾಜ್ಯ ಸರ್ಕಾರ ಮಂಜುನಾಥ್ ಅವರನ್ನು ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಂ ಡೈರೆಕ್ಟರ್ ಆಗಿ ವರ್ಗಾವಣೆ ಮಾಡಿತ್ತು

- Advertisement -

Latest News

error: Content is protected !!