Sunday, June 7, 2026
HomeWorldಕಾಬೂಲ್ ತಲುಪಿದ ಭಾರತ ವಾಯುಪಡೆಯ ಸಿ-17 ಗ್ಲೋಬ್​ ಮಾಸ್ಟರ್: 500ಕ್ಕೂ ಹೆಚ್ಚು ಭಾರತೀಯರ ಏರ್​ಲಿಫ್ಟ್​ ಸಾಧ್ಯತೆ!

ಕಾಬೂಲ್ ತಲುಪಿದ ಭಾರತ ವಾಯುಪಡೆಯ ಸಿ-17 ಗ್ಲೋಬ್​ ಮಾಸ್ಟರ್: 500ಕ್ಕೂ ಹೆಚ್ಚು ಭಾರತೀಯರ ಏರ್​ಲಿಫ್ಟ್​ ಸಾಧ್ಯತೆ!

- Advertisement -
- Advertisement -

ಕಾಬೂಲ್: ತಾಲಿಬಾನ್ ವಶಕ್ಕೆ ಸಿಲುಕಿರುವ ಅಫ್ಘಾನಿಸ್ತಾನದಲ್ಲಿರುವ 500ಕ್ಕೂ ಹೆಚ್ಚು ಭಾರತೀಯರನ್ನು ಕರೆತರಲು ಭಾರತ ಸರ್ಕಾರವು ವಾಯುಪಡೆಯ ದೈತ್ಯ ಸಿ-17 ಗ್ಲೋಬ್​ ಮಾಸ್ಟರ್​ ವಿಮಾನವನ್ನು ಕಳುಹಿಸಿಕೊಟ್ಟಿದ್ದು, ವಿಮಾನವು ಸೋಮವಾರ ಸಂಜೆ ಕಾಬೂಲ್​ನಲ್ಲಿ ಲ್ಯಾಂಡ್​ ಆಗಿದೆ.

ವಿಮಾನ ನಿಲ್ದಾಣದ ಸಮೀಪಕ್ಕೆ ಬಂದಿರುವ 500ಕ್ಕೂ ಹೆಚ್ಚು ಭಾರತೀಯ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ಸ್ವದೇಶಕ್ಕೆ ಏರ್​ಲಿಫ್ಟ್​ ಮಾಡಲಿದೆ.ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗೊಂದಲದ ವಾತಾವರಣ ಮುಂದುವರಿದಿದ್ದ ಕಾರಣ ಸೋಮವಾರ ಕಜಕಿಸ್ತಾನದಲ್ಲಿ ವಾಯುಸೇನೆಯ ವಿಮಾನ ಲ್ಯಾಂಡ್ ಆಗಿತ್ತು. ಅಮೆರಿಕದ ಭದ್ರತಾ ಸಿಬ್ಬಂದಿ ವಿಮಾನ ನಿಲ್ದಾಣವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡ ನಂತರ ಭಾರತದ ವಿಮಾನಕ್ಕೆ ಲ್ಯಾಂಡ್ ಆಗಲು ಅವಕಾಶ ಕಲ್ಪಿಸಲಾಯಿತು.

ಕಾಬೂಲ್​ ನಗರದ ವಿವಿಧೆಡೆ ಸಿಲುಕಿರುವ ಭಾರತೀಯ ಪ್ರಜೆಗಳನ್ನು ವಿಮಾನ ನಿಲ್ದಾಣಕ್ಕೆ ತಲುಪಿಸಲೆಂದು ಅಫ್ಘಾನಿಸ್ತಾನದಲ್ಲಿರುವ ಭಾರತೀಯ ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ಚರ್ಚಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣದ ಭದ್ರತೆಗಾಗಿ ಅಮೆರಿಕ ಕನಿಷ್ಠ 6 ಸಾವಿರ ಯೋಧರನ್ನು ನಿಯೋಜಿಸುವ ಸಾಧ್ಯತೆಯಿದೆ ಎಂದು ಹೇಳಾಲಾಗಿದೆ.

- Advertisement -

Latest News

error: Content is protected !!