Saturday, June 13, 2026
Homeಕರಾವಳಿಉಡುಪಿಮೂಡುಬಿದಿರೆ: ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ 12 ಜನರ ಬಂಧನ

ಮೂಡುಬಿದಿರೆ: ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ 12 ಜನರ ಬಂಧನ

- Advertisement -
- Advertisement -

ಮಂಗಳೂರು: ಮನೆ ಹಿಂಬದಿಯಲ್ಲಿ ಬೇಟೆಯಾಡಿದ ಕಾಡು ಹಂದಿಯನ್ನು ಮಾಂಸ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ 12 ಮಂದಿಯನ್ನು ಬಂಧಿಸಿದ ಘಟನೆ ಮೂಡುಬಿದಿರೆ ಪೊಲೀಸ್‌ ಠಾಣಾ ವ್ಯಾಪ್ತಿಯ ಕೊಡ್ಯಡ್ಕ ಗುಡ್ಡೆಯಂಗಡಿಯಲ್ಲಿ ನಡೆದಿದೆ.

ಮೂಡುಬಿದಿರೆ ತಾಲೂಕು ಮಿತ್ತಬೈಲು ನಿವಾಸಿ ಜಾನ್ ಸಿ.ಮೆನೇಜಸ್, ಕಲ್ಲಮುಂಡ್ಕೂರು ಗ್ರಾಮದ ನಿವಾಸಿಗಳಾದ ಶ್ರೀನಿವಾಸ, ಗುರುಪ್ರಸಾದ್, ಅಜೇಯ್, ಸನತ್, ಗಣೇಶ್ ಬೆಳುವಾಯಿ ಗ್ರಾಮದ ಜೋಯೆಲ್ ಅನಿಲ್ ಡಿಸೋಜ, ಪಾಲಡ್ಕ ಗ್ರಾಮದ ಹರೀಶ್ ಪೂಜಾರಿ, ನೋಣಯ್ಯ, ಕಡಂದಲೆ ಗ್ರಾಮದ ಮೋಹನ್ ಗೌಡ, ರಮೇಶ್, ಕಾರ್ಕಳ ತಾಲೂಕು ಬೋಳ ಗ್ರಾಮದ ವಿನಯ್ ಪೂಜಾರಿ ಬಂಧಿತರು.

ಸಂರಕ್ಷಿತ ಅರಣ್ಯಕ್ಕೆ ಹೋಗಿ ಬೇಟೆಯಾಡಿ ಕಾಡು ಹಂದಿಯನ್ನು ತಂದಿದ್ದರು ಎನ್ನಲಾಗಿದೆ. ಆರೋಪಿಗಳಿಂದ ಕೊಲ್ಲಲ್ಪಟ್ಟ ಎರಡು ಕಾಡು ಹಂದಿ, ನಾಲ್ಕು ಸಿಂಗಲ್ ಬ್ಯಾರೆಲ್ ರೈಫಲ್, ಎರಡು ಬಂದೂಕಿನ ತೋಟೆ, ಹಂದಿ ಹಿಡಿಯಲು ಉಪಯೋಗಿಸಿದ ನಾಲ್ಕು ಬಲೆ, ಕಬ್ಬಿಣದ ಬರ್ಚಿ, ಗ್ಯಾಸ್ ಸಿಲಿಂಡರ್ ಮತ್ತು ಎರಡು ಓಮಿನಿ ಕಾರು, 12 ಮೊಬೈಲ್ ಫೋನ್‌ಗಳು ಹಾಗು ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

- Advertisement -

Latest News

error: Content is protected !!