Saturday, May 4, 2024
Homeಅಪರಾಧಕೊರೊನಾಗೆ ಹೆದರಿ ಮಂಗಳೂರಿನಲ್ಲಿ ದಂಪತಿ ಆತ್ಮಹತ್ಯೆ ಶರಣು

ಕೊರೊನಾಗೆ ಹೆದರಿ ಮಂಗಳೂರಿನಲ್ಲಿ ದಂಪತಿ ಆತ್ಮಹತ್ಯೆ ಶರಣು

spot_img
- Advertisement -
- Advertisement -

ಮಂಗಳೂರು: ಕೊರೊನಾ ಮಾಹಾಮಾರಿಗೆ ಹೆದರಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಚಿತ್ರಪುರದ ರೆಹೆಜಾ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.

ಮಂಗಳೂರು ಬಳಿಯ ಚಿತ್ರಾಪುರದ ರೆಹೆಜಾ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ರಮೇಶ್ ಕುಮಾರ್ ದಂಪಿತಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೊರೊನಾಗೆ ಹೆದರಿ ಮನೆಯಲ್ಲಿರುವ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂದು ಬೆಳಿಗ್ಗೆ 6.40ರ ವೇಳೆಗೆ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಗೆ ಕರೆ ಮಾಡಿರುವಂತ ರಮೇಶ್ ಎಂಬುವರು, ತನ್ನ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಾನು ಕೂಡ ಆತ್ಮಹತ್ಯೆಗೆ ಶರಣಾಗುತ್ತೇನೆ ಎಂಬುದಾಗಿ ತಿಳಿಸಿದ್ದಾನೆ. ಕೂಡಲೇ ಅವರಿಗೆ ಮರು ಕರೆ ಮಾಡಿದ್ರೇ.. ಪೋನ್ ಪಿಕ್ ಮಾಡಿಲ್ಲ. ಹೀಗಾಗಿ ವಾಯ್ಸ್ ಮೆಸೇಜ್ ಕಳಿಸಿರುವಂತ ಆಯುಕ್ತರು, ಆತ್ಮಹತ್ಯೆ ಮಾಡಿಕೊಳ್ಳದಂತೆ ಧೈರ್ಯ ತುಂಬಿದ್ದಾರೆ.

ಯಾವಾಗ ಪೋನ್ ಪಿಕ್ ಮಾಡಲಿಲ್ಲವೇ.. ಕೂಡಲೇ ಸಂಬಂಧಿಸಿದಂತ ಅಧಿಕಾರಿಗಳಿಗೆ ಮಾಹಿತಿ ತಿಳಿಸಿ, ರಮೇಶ್ ನಂಬರ್ ಲೊಕೇಷನ್ ಟ್ರೇಸ್ ಮಾಡಿ, ಪ್ಲಾಟ್ ಗೆ ತೆರಳಿ ನೋಡಿದಾಗ, ಬಾಗಿಲು ಹಾಕಿರೋದು ಕಂಡಿದೆ. ಬಾಗಿಲನ್ನು ಮುರಿದು ಒಳಗೆ ತೆರಳಿದಾಗ, ಪತಿ-ಪತ್ನಿ ಇಬ್ಬರು ಆತ್ಮಹತ್ಯೆಗೆ ಶರಣಾಗಿರೋದು ತಿಳಿದು ಬಂದಿದೆ.

ಆತ್ಮಹತ್ಯೆಗೂ ಮುನ್ನಾ ಸುದೀರ್ಘ ಪತ್ರ ಬರೆದಿಟ್ಟಿರುವಂತ ದಂಪತಿಗಳು, ತಮಗೆ ಕೊರೋನಾ ಸೋಂಕು ತಗುಲಿದೆ. ಆನಂತ್ರ ಉಂಟಾದಂತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇವೆ. ಮಕ್ಕಳನ್ನು ಪಡೆಯಲು ಯತ್ನಿಸಿದ್ರೂ ಅನಾರೋಗ್ಯದಿಂದಾಗಿ ಸಾಧ್ಯವಾಗಿಲ್ಲ. ಕೊರೋನಾ ನಮ್ಮನ್ನು ಕಾಡುತ್ತಿದೆ ಎಂಬುದಾಗಿ ಹೇಳಿಕೊಂಡು, ಆತ್ಮಹತ್ಯೆಗೆ ಶರಣಾಗಿರೋದಾಗಿ ತಿಳಿಸಿದ್ದಾರೆ.
ಇನ್ನೂ ತಮ್ಮ ಅಂತ್ಯಕ್ರಿಯೆಗೆ 1 ಲಕ್ಷ ಹಣವಿದೆ. ಅದರನ್ನು ಬಳಸಿಕೊಳ್ಳುವಂತೆ ಸೂಚಿಸಿರುವಂತ ದಂಪತಿಗಳು, ಮನೆಯಲ್ಲಿನ ವಸ್ತುಗಳನ್ನು ಮಾರಾಟ ಮಾಡಿ, ಬಡವರಿಗೆ ಸಹಾಯ ಮಾಡುವಂತೆ ಕೋರಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದಂತ ಡಿಸಿಪಿ ಹರಿರಾಂ ಶಂಕರ್, ಬೆಳಿಗ್ಗೆ 6.40ರ ಸುಮಾರಿಗೆ ಕಮೀಷನರ್ ಅವರಿಗೆ ವಾಟ್ಸ್ ಆಪ್ ಮೆಸೇಜ್ ಹಾಗೂ ಕಾಲ್ ಮಾಡಿದ್ದರು. ಕೊರೋನಾ ಭಯದಿಂದ ತಾನು, ತನ್ನ ಪತ್ನಿ ಆತ್ಮಹತ್ಯೆಗೆ ಶರಣಾಗುತ್ತಿರೋದಾಗಿ ತಿಳಿಸಿದ್ದರು. ತಕ್ಷಣವೇ ಕಮೀಷನರ್ ಕಾಲ್ ಮಾಡಿದ್ರು ಅವರು ಪಿಕ್ ಮಾಡಲಿಲ್ಲ. ನಂತ್ರ ಲೊಕೇಷನ್ ಟ್ರೇಸ್ ಮಾಡಿ, ಬಾಗಿಲು ಒಡೆದು ನೋಡಿದಾಗ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ತಿಳಿದು ಬಂದಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಮಾಹಿತಿ ಕೂಡ ನೀಡಿದ್ದು, ಅವರಿಗೆ ಕೊರೋನಾ ಬಂದಿದ್ದ ಬಗ್ಗೆ ಮಾಹಿತಿ ಇಲ್ಲ. ಡೆತ್ ನೋಟ್ ನಲ್ಲಿ ನಮಗೆ ಕೊರೋನಾ ಇದೆ, ಬ್ಲಾಕ್ ಫಂಗಸ್ ಸಮಸ್ಯೆ ಅಂತೆಲ್ಲಾ ಬರೆದಿದ್ದಾರೆ. ಆದ್ರೇ.. ಅವರೇ ಸ್ವಂತ ನಿರ್ಧಾರಕ್ಕೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿಸಿದರು.

.

- Advertisement -
spot_img

Latest News

error: Content is protected !!