Tuesday, June 9, 2026
Homeತಾಜಾ ಸುದ್ದಿಜೂನ್ 21ಕ್ಕೆ ಮೈಸೂರಿಗೆ ಪ್ರಧಾನಿ  ಆಗಮನ; ಕನ್ನಡಿಗರ ಪರವಾಗಿ ಮೋದಿಜಿಗೆ ಸ್ವಾಗತ ಕೋರುತ್ತೇನೆಂದ ಸಂಸದ ಪ್ರತಾಪ್...

ಜೂನ್ 21ಕ್ಕೆ ಮೈಸೂರಿಗೆ ಪ್ರಧಾನಿ  ಆಗಮನ; ಕನ್ನಡಿಗರ ಪರವಾಗಿ ಮೋದಿಜಿಗೆ ಸ್ವಾಗತ ಕೋರುತ್ತೇನೆಂದ ಸಂಸದ ಪ್ರತಾಪ್ ಸಿಂಹ

- Advertisement -
- Advertisement -

ಹಾಸನ : ವಿಶ್ವ ಯೋಗ ದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ಸಮಸ್ತ ಕನ್ನಡಿಗರ ಪರವಾಗಿ ಅವರಿಗೆ ಸ್ವಾಗವನ್ನು ಕೋರುತ್ತೇನೆ ಎಂದು ಸಂಸದ ಪ್ರತಾಪ ಸಿಂಹ ಮಾಹಿತಿ ನೀಡಿದ್ದಾರೆ. 

ಕಳೆದ ಏಪ್ರಿಲ್ 5ರಂದು ನನ್ನ ಕುಟುಂಬ, ನಮ್ಮ ಪಾರ್ಲಿಮೆಂಟರಿ ಅಫೇರ್ಸ್ ಮಿನಿಸ್ಟರ್ ಆದಂತಹ ಪ್ರಹ್ಲಾದ್ ಜೋಶಿ ಅವರೊಂದಿಗೆ ಹೋಗಿ, ಮೋದಿ ಅವರನ್ನು ಖುದ್ದಾಗಿ ಮೈಸೂರಿಗೆ ಆಗಮಿಸಲು ಮನವಿ ಮಾಡಿದ್ದೆವು. 

ಮೈಸೂರು ಸಿಟಿ ಆಫ್ ಯೋಗ ಎಂದು ಪ್ರಸಿದ್ಧಿ ಪಡೆದಿದ್ದು, ಮಹಾರಾಜರು, ಅಯ್ಯಂಗಾರರು, ಸೇರಿದಂತೆ ಹಲವರ ಪ್ರೋತ್ಸಾಹದಿಂದ ಮೈಸೂರು ಸಿಟಿ ಆಫ್ ಯೋಗ ಎನಿಸಿಕೊಂಡಿದೆ. ಇದೀಗ ನಮ್ಮ ಮನವಿಗೆ ಸ್ಪಂದಿಸಿ ಮೋದಿ ಮೈಸೂರಿಗೆ ಭೇಟಿ ನೀಡುತ್ತಿರುವುದು ಅತೀವ ಸಂತೋಷದ ವಿಚಾರವಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಯೋಗಪಟುಗಳನ್ನು ಒಂದೇ ಕಡೆ ಕಲೆ ಹಾಕುತ್ತಿದ್ದು, ಈ ಕಾರ್ಯಕ್ರಮ ಬಹಳ ವಿಶೇಷತೆಯಿಂದ ಕೂಡಿರುತ್ತದೆ ಎಂದರು.

ಮೋದಿ ಅವರ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು, ಕ್ಯಾಬಿನೆಟ್ ಮಂತ್ರಿಗಳು ಸೇರಿದಂತೆ ಹಲವಾರು ಜನ ಪಾಲ್ಗೊಳ್ಳುತ್ತಿದ್ದು, ಭದ್ರತೆ ವಿಷಯಕ್ಕೆ ಸಂಬಂಧಿಸಿದಂತೆ  ಜಿಲ್ಲಾಡಳಿತ, ರಾಜ್ಯಸರ್ಕಾರ ಎಸ್‍ಬಿಜಿ ಜೊತೆಗೆ ಸಮನ್ವಯ ನಡೆಸಲಿದೆ ಎಂದಿದ್ದಾರೆ

- Advertisement -

Latest News

error: Content is protected !!