Friday, April 19, 2024
Homeಮನರಂಜನೆ"ಚಿರು ಮಗನನ್ನು ನಾನೇ ಚಿತ್ರರಂಗಕ್ಕೆ ಪರಿಚಯಿಸ್ತೀನಿ" ನಟ ಅರ್ಜುನಾ ಸರ್ಜಾ ಹೇಳಿಕೆ

“ಚಿರು ಮಗನನ್ನು ನಾನೇ ಚಿತ್ರರಂಗಕ್ಕೆ ಪರಿಚಯಿಸ್ತೀನಿ” ನಟ ಅರ್ಜುನಾ ಸರ್ಜಾ ಹೇಳಿಕೆ

spot_img
- Advertisement -
- Advertisement -

ಬೆಂಗಳೂರು ನಟ ದಿವಂಗತ ಚಿರಂಜೀವಿ ಸರ್ಜಾ ಮಗನನ್ನು 20 ವರ್ಷದ ಬಳಿಕ ನಾನೇ ಚಿತ್ರರಂಗಕ್ಕೆ ಬಹುಶಃ ಪರಿಚಯಿಸಬಹುದು ಎಂದು ನಟ ಅರ್ಜುನ್ ಸರ್ಜಾ ಹೇಳಿದ್ದಾರೆ.

ಅರ್ಜುನ್ ಸರ್ಜಾ ಅವರು ಇಂದು ಆಸ್ಪತ್ರೆಗೆ ತೆರಳಿ ಚಿರು ಪುತ್ರನನ್ನು ನೋಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 20 ವರ್ಷದ ನಂತರ ಚಿರು ಮಗನನ್ನು ನಾನೇ ಬಹುಶಃ ಲಾಂಚ್ ಮಾಡ್ತೀನಿ. ಸೀಮಂತದ ಸಮಯದಲ್ಲಿ ಹಾರ್ಟ್ಲಿ ವೆಲ್ಕಮ್ ಜೂನಿಯರ್ ಚಿರು ಅಂತ ಎಲ್ಲರೂ ಹಾಡಿದ್ವಿ. ನಮಗೂ ಗಂಡು ಮಗು ಆಗುತ್ತೆ ಅಂತ ಗೊತ್ತಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

ಚಿರು ಅಗಲಿಕೆ ಪ್ರತಿಯೊಬ್ಬರಿಗೂ ಜೀರ್ಣಿಸಿಕೊಳ್ಳಲು ಆಗದಷ್ಟು ನೋವಾಗಿತ್ತು. ಈಗ ಎಲ್ಲರ ಮುಖದಲ್ಲಿ ಕಾಂತಿ ಬಂದಿದೆ. ಸಣ್ಣ ನಗು ಕಾಣಿಸಿಕೊಂಡಿದೆ. ಚಿರು ಈ ಸಮಯದಲ್ಲಿ ಇರಬೇಕಾಗಿತ್ತು ಈ ಸಂಭ್ರಮ ನೋಡಬೇಕಿತ್ತು ಎಂದು ಗದ್ಗದಿತರಾದರು. 36 ವರ್ಷದ ಹಿಂದೆ ಶೂಟಿಂಗ್ ನಿಲ್ಲಿಸಿ ಚಿರು ನೋಡಲು ಬೆಂಗಳೂರಿಗೆ ಬಂದಿದ್ದೆ. ಈಗ ಅವನ ಮಗನನ್ನ ನೋಡಲು ಬಂದಿದ್ದೇನೆ ಎಂದು ಅರ್ಜುನ್ ಸರ್ಜಾ ಖುಷಿ ಹಂಚಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!