Friday, June 5, 2026
Homeತಾಜಾ ಸುದ್ದಿಆಭರಣ ಪ್ರಿಯರಿಗೆ ಮತ್ತೆ ಸಂತಸದ ಸುದ್ದಿ, ಸತತ ಎರಡನೇ ದಿನವೂ ಚಿನ್ನದ ದರದಲ್ಲಿ ಇಳಿಕೆ

ಆಭರಣ ಪ್ರಿಯರಿಗೆ ಮತ್ತೆ ಸಂತಸದ ಸುದ್ದಿ, ಸತತ ಎರಡನೇ ದಿನವೂ ಚಿನ್ನದ ದರದಲ್ಲಿ ಇಳಿಕೆ

- Advertisement -
- Advertisement -

ಬೆಂಗಳೂರು: ಕೊರೊನಾ ಆತಂಕ ನಡುವೆ ಚಿನ್ನದ ಬೆಲೆ ಹಾವು ಏಣಿ ಆಟ ಆಡುತ್ತಿದೆ. ಲಾಕ್‌ ಡೌನ್‌ ಕಾಲದಲ್ಲಿ ಗಗನಕ್ಕೇರಿದ್ದ ಬಂಗಾರದ ಬೆಲೆ ಕೊಂಚ ಕೊಂಚವೇ ಇಳಿಕೆಯಾಗ್ತಿದೆ. ಸದ್ಯ ಸತತ ಎರಡನೇ ದಿನವೂ ಚಿನ್ನದ ದರದಲ್ಲಿ ಭಾರೀ ಇಳಿಕೆ ಕಂಡಿದ್ದು ಗ್ರಾಹಕರನ್ನ ಹಿಗ್ಗುವಂತೆ ಮಾಡಿದೆ.

ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 210 ರೂಪಾಯಿ ಇಳಿಕೆಯಾಗಿದ್ದು, ಈ ಮೂಲಕ ಬೆಲೆ 47,000 ರೂಪಾಯಿಯಾಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರವೂ 130 ರೂಪಾಯಿ ಇಳಿಕೆ ಕಂಡಿದ್ದು, 51,270 ರೂಪಾಯಿ ಆಗಿದೆ. ಇನ್ನು ಇತ್ತ ಬೆಳ್ಳಿ ದರವೂ 100 ರೂ.ಇಳಿಕೆಯಾಗಿ. ಒಂದು ಕೆ. ಜಿ ಬೆಳ್ಳಿಯ ಬೆಲೆ 62,500 ರೂ ಆಗಿದೆ. ತಜ್ಞರು ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದು, ಚಿನ್ನ ಕೊಳ್ಳುವುದಕ್ಕೆ ಇದು ಸಕಾಲ ಅನ್ಬೋದು.

- Advertisement -

Latest News

error: Content is protected !!