Thursday, June 25, 2026
Homeತಾಜಾ ಸುದ್ದಿನಾನು ಬಾವಿಗೆ ಹಾರಿ ಸಾಯುತ್ತೇನೆಯೇ ಹೊರತು ಕಾಂಗ್ರೆಸ್‌ಗೆ ಸೇರಲ್ಲ ಎಂದಿದ್ದೆ: ನಿತಿನ್‌ ಗಡ್ಕರಿ

ನಾನು ಬಾವಿಗೆ ಹಾರಿ ಸಾಯುತ್ತೇನೆಯೇ ಹೊರತು ಕಾಂಗ್ರೆಸ್‌ಗೆ ಸೇರಲ್ಲ ಎಂದಿದ್ದೆ: ನಿತಿನ್‌ ಗಡ್ಕರಿ

- Advertisement -
- Advertisement -

ನವದೆಹಲಿ: ತಾವು ವಿದ್ಯಾರ್ಥಿ ನಾಯಕರಾಗಿದ್ದಾಗ ಕಾಂಗ್ರೆಸ್ ಮುಖಂಡ ಶ್ರೀಕಾಂತ್ ಜಿಚ್ಕರ್ ಉತ್ತಮ ಭವಿಷ್ಯಕ್ಕಾಗಿ ಕಾಂಗ್ರೆಸ್ ಸೇರುವಂತೆ ಕೇಳಿಕೊಂಡಿದ್ದರು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಆಗ ಶ್ರೀಕಾಂತ್‌ಗೆ, ನಾನು ಬಾವಿಗೆ ಹಾರಿ ಸಾಯುತ್ತೇನೆಯೇ ಹೊರತು ಕಾಂಗ್ರೆಸ್‌ಗೆ ಸೇರುವುದಿಲ್ಲ. ಏಕೆಂದರೆ ನನಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಇಷ್ಟವಿಲ್ಲ ಎಂದು ಹೇಳಿದ್ದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಉದ್ಯಮಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ, ವ್ಯಾಪಾರ, ಸಾಮಾಜಿಕ ಕೆಲಸ ಅಥವಾ ರಾಜಕೀಯದಲ್ಲಿರುವ ಯಾರಿಗಾದರೂ ಮಾನವನ ಸಂಬಂಧವೇ ದೊಡ್ಡ ಶಕ್ತಿಯಾಗಿದೆ. ಆದ್ದರಿಂದ, ಒಳ್ಳೆಯ ದಿನಗಳು ಅಥವಾ ಕೆಟ್ಟ ದಿನಗಳಲ್ಲಿ ಒಮ್ಮೆ ನೀವು ಯಾರದ್ದಾದರೂ ಕೈಯನ್ನು ಹಿಡಿದರೆ ಆ ಕೈಯನ್ನು ಯಾವಾಗಲೂ ಹಿಡಿದುಕೊಳ್ಳಿ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!