Friday, June 5, 2026
Homeಕರಾವಳಿಉಡುಪಿಉಡುಪಿ: ತೀವ್ರ ಜ್ವರದಿಂದ ನಾಲ್ಕು‌ ತಿಂಗಳ‌ ಕಂದಮ್ಮ ಸಾವು

ಉಡುಪಿ: ತೀವ್ರ ಜ್ವರದಿಂದ ನಾಲ್ಕು‌ ತಿಂಗಳ‌ ಕಂದಮ್ಮ ಸಾವು

- Advertisement -
- Advertisement -

ಉಡುಪಿ: ತೀವ್ರ ಜ್ವರದಿಂದಾಗಿ ನಾಲ್ಕು ತಿಂಗಳ ಮಗುವೊಂದು ಮೃತಪಟ್ಟ ಘಟನೆ ಯಡ್ತರೆ ಗ್ರಾಮದ ಉದುರು ಎಂಬಲ್ಲಿ ನಡೆದಿದೆ.

ಉಪ್ಪುಂದ ಗ್ರಾಮದ ಶೇಖರ ಖಾರ್ವಿ ಹಾಗೂ ಶೈಲಾ ದಂಪತಿಯ ನಾಲ್ಕು ತಿಂಗಳ ಹೆಣ್ಣುಮಗು ಸಾನ್ವಿತಾ ಮೃತ ಮಗು.

ಶೈಲಾ ಹೆರಿಗೆಯಾಗಿ  ಉದುರುವಿನಲ್ಲಿ ತಾಯಿ ಮನೆಯಲ್ಲಿ ವಾಸವಾಗಿದ್ದರು.  ಆ.27ರಂದು ರಾತ್ರಿ ಮಗು ತೀವ್ರ ಚಳಿ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಬೈಂದೂರು ಅಂಜಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.

ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ರಾತ್ರಿ 12:15ಕ್ಕೆ ಕರೆದುಕೊಂಡು ಹೋದಾಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ದಾರಿ ಮಧ್ಯದಲ್ಲಿಯೇ ಸಾನ್ವಿತಾ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

- Advertisement -

Latest News

error: Content is protected !!