Sunday, May 5, 2024
Homeತಾಜಾ ಸುದ್ದಿಹತ್ತು ದಿನದೊಳಗೆ ಜುಲೈ ಮತ್ತು ಆಗಸ್ಟ್ ಮೊದಲನೇ ವಾರದ ಬೆಳೆ ನಾಶಕ್ಕೆ ಪರಿಹಾರ...

ಹತ್ತು ದಿನದೊಳಗೆ ಜುಲೈ ಮತ್ತು ಆಗಸ್ಟ್ ಮೊದಲನೇ ವಾರದ ಬೆಳೆ ನಾಶಕ್ಕೆ ಪರಿಹಾರ ಪಾವತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

spot_img
- Advertisement -
- Advertisement -

ರಾಮನಗರ: ಜುಲೈ ತಿಂಗಳು ಮತ್ತು ಆಗಸ್ಟ್ ಮೊದಲನೇ ವಾರದಲ್ಲಿ ಆದ ಬೆಳೆ ನಾಶದ ಪರಿಹಾರ ಪಾವತಿಗೆ ಕಂದಾಯ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇನ್ನು ಹತ್ತು ದಿನಗಳೊಳಗೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಮನಗರದಲ್ಲಿ‌ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ,
ಬೆಳೆನಾಶದ ಬಗ್ಗೆ ಕೂಡಲೇ ಜಂಟಿ ಸರ್ವೆ, ದಾಖಲೆಗಳನ್ನು ಅಪಲೋಡ್ ಮಾಡಲಾಗುತ್ತಿದೆ. ಕಳೆದ 3 ದಿನದಿಂದ ಆಗಿರುವ ಹಾನಿಯ ವರದಿ ಸಲ್ಲಿಸಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರದ ಎರಡುಪಟ್ಟು ಹೆಚ್ಚಿಸಿ ಬೆಳೆ ಪರಿಹಾರವನ್ನು ನೀಡಲಾಗುತ್ತಿದೆ. ಒಣ ಬೇಸಾಯಕ್ಕೆ 13,600 ರೂ., ತೋಟಗಾರಿಕೆ ಬೆಳೆಗೆ 28,000 ರೂ., ನೀರಾವರಿಗೆ 25, 000 ರೂ. ಪರಿಹಾರ ನೀಡಲಾಗುತ್ತಿದೆ. ಕಳೆದ ಬಾರಿ ನಾಶವಾದ 14 ಲಕ್ಷ ಎಕರೆ ನಾಶಕ್ಕೆ 1100 ಕೋಟಿಗೂ ಹೆಚ್ಚುವರಿ ಪರಿಹಾರವನ್ನು ಕೇವಲ ಒಂದೂವರೆ ತಿಂಗಳಲ್ಲಿ ವಿತರಣೆ ಮಾಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ಈ ಬಾರಿಯೂ ಒಂದೂವರೆ ತಿಂಗಳಲ್ಲಿ ಬೆಳೆ ಪರಿಹಾರವನ್ನು ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

- Advertisement -
spot_img

Latest News

error: Content is protected !!