ಮುಂಬೈ : ಕಳೆದ ಒಂದು ತಿಂಗಳಿನಿಂದ ಲಾಕ್ ಡೌನ್ ನಿಂದಾಗಿ ನಮಗೆ ಕೆಲಸವೂ ಇಲ್ಲ, ವೇತನವೂ ಇಲ್ಲ. ಹೀಗಾಗಿ ದಿನದ ಒಪ್ಪತ್ತಿನ ಊಟಕ್ಕೂ ಕಷ್ಟವಾಗಿದೆ. ಇಲ್ಲಿನ ಸರ್ಕಾರವಾಗಲೀ, ಸ್ಥಳೀಯರಾಗಲೀ ನಮಗೆ ಯಾವುದೇ ಸಹಾಯ ನೀಡಿಲ್ಲ. ಕೆಲಸ ಕೊಡಿ, ವೇತನಕೊಟ್ಟು ಊಟಕ್ಕೆ ಸಹಾಯಮಾಡಿ ಎಂಬುದಾಗಿ ಒತ್ತಾಯಿಸಿ, ಮುಂಬೈನ ಬಾಂದ್ರಾದಲ್ಲಿ ನೂರಾರು ಕಾರ್ಮಿಕರು ಲಾಕ್ ಡೌನ್ ನಡುವೆಯೂ ಪ್ರತಿಭಟನೆ ನಡೆಸಿದ್ದಾರೆ.
ದೇಶಾದ್ಯಂತ ಲಾಕ್ ಡೌನ್ ನಿಂದಾಗಿ ಕೂಲಿ ಕಾರ್ಮಿಕರು ಸೇರಿದಂತೆ ಅನೇಕ ಕಾರ್ಮಿಕರಿಗೆ ಕೆಲಸವಿಲ್ಲದಂತೆ ಆಗಿದೆ. ಹೀಗಾಗಿ ಅತ್ತ ಕೆಲಸವಿಲ್ಲದೇ ಇತ್ತ ಹೊಟ್ಟೆಗೆ ಊಟವೂ ಇಲ್ಲದೇ ಅನೇಕ ಕಡೆಯಲ್ಲಿ ಹಸಿವಿನಿಂದ ನರಳಾಡುವಂತ ಪರಿಸ್ಥಿತಿ ಅನೇಕ ಕಡೆಯಲ್ಲಿ ನಿರ್ಮಾಣವಾಗಿತ್ತು. ಇದೀಗ ಇಂತಹ ಪರಿಸ್ಥಿತಿಯ ಕಟ್ಟೆ ಮುಂಬೈನ ಬಾಂದ್ರಾದಲ್ಲಿ ಹೊಡಿದಿದೆ. ಕೆಲಸ ಕೊಡ್ಡಿ, ಇಲ್ಲವೇ ಊಟಕೊಡಿ ಎಂಬುದಾಗಿ ಆಗ್ರಹಿಸಿ, ನೂರಾರು ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದಾರೆ.
ಮುಂಬೈನ ಬಾಂದ್ರಾದಲ್ಲಿನ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ಪೊಲೀಸರ ಮುಂದೆ, ನಮಗೆ ಒಂದು ತಿಂಗಳಿನಿಂದ ಊಟವೂ ಇಲ್ಲ. ಕೆಲಸವೂ ಇಲ್ಲ. ಈವರೆಗೆ ನಮಗೆ ಇಲ್ಲಿನ ಸರ್ಕಾರ ಏನೂ ಕೊಟ್ಟಿಲ್ಲ. ನಮ್ಮ ಊರಿಗೆ ಹೋಗಲು ಆದ್ರೂ ಬಿಡಿ ಎಂಬುದಾಗಿ ಕಣ್ಣೀರಿಟ್ಟಿದ್ದಾರೆ. ಇಂತಹ ಕೂಲಿಕಾರ್ಮಿಕರ ಪರಿಸ್ಥಿತಿ ಗಮನಿಸಿದ ಪೊಲೀಸರು ಕೂಡಲೇ ಅಗತ್ಯ ವಸ್ತು ವಿತರಿಸಲು ಮುಂದಾದಾಗ ನೂಕು ನುಗ್ಗಲು ಉಂಟಾಗಿತ್ತು. ಈಗಾಗಿ ಲಾಠಿ ಚಾರ್ಚೂ ಕೂಡ ಮಾಡಲಾಗಿದೆ.