ಬೆಳ್ತಂಗಡಿ: ಲಾಕ್ ಡೌನ್ ಸಮಯದಲ್ಲಿ ತನ್ನ ವಿಧಾನ ಸಭಾ ಕ್ಷೇತ್ರದ ಜನರು ದೇಶದ ವಿವಿಧ ಭಾಗದಲ್ಲಿ ಸಿಕ್ಕಿ ಹಾಕಿಕೊಂಡ ಕುರಿತು ಮನಬಿಚ್ಚಿ ಮಾತನಾಡಿರುವ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, “ನಮ್ಮೂರ ಹುಡುಗರು ಅವರ ಕುಟುಂಬಿಕರು ದೇಶದ ನಾನಾ ಭಾಗಗಳಲ್ಲಿ ಇದ್ದಾರೆ, ನಾವು ಸಹಾಯ ಮಾಡಬೇಕು ಅವರುಗಳನ್ನು ಅವರ ಕುಟುಂಬದ ಜೊತೆ ಸೇರಿಸಬೇಕು ಕಡೆಯ ಪಕ್ಷ ಊರಿಗಾದರೂ ಬರುವ ವ್ಯವಸ್ಥೆ ಮಾಡಬೇಕು ಎನ್ನುವ ಆಸೆ ನನ್ನದು. ಅದರೆ ಪರಿಸ್ಥಿತಿ ಅದಕ್ಕೆ ಒಂದು ಚೂರೂ ಪೂರಕವಾಗಿಲ್ಲ, ನನಗೆ ಸಹಾಯ ಕೇಳಿ ಪೋನ್ ಮಾಡುವ ಬಹಳ ಜನಕ್ಕೆ ಈ ಸತ್ಯ ಗೊತ್ತು ಕೊನೆಯ ಪ್ರಯತ್ನ ಅನ್ನುವ ನಿಟ್ಟಿನಲ್ಲಿ ನನಗೆ ಕರೆ ಮಾಡುತ್ತಾರೆ ಎಂದು ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.
ಈ ಕೋವಿಡ್ -19 ಸೋಂಕು ನಿಯಂತ್ರಣ ಬರುವವರೆಗೆ ಪ್ರಭು ಶ್ರೀ ರಾಮ ಚಂದ್ರ ವನವಾಸ ಅನುಭವಿಸಿದಂತೆ ,ಪಾಂಡವರು ವನವಾಸ ಮತ್ತು ಆಜ್ಙಾತವಾಸ ಅನುಭವಿಸಿದಂತೆ ನಾವುಗಳು ನಮ್ಮ ಪ್ರೀತಿ ಪಾತ್ರರಿಂದ ದೂರವಿರುವ ನೋವನ್ನು ಅನುಭವಿಸಬೇಕಾಗಿದೆ ಎನ್ನುವ ಶಾಸಕ ಹರೀಶ್ ಪೂಂಜ ಹೊರನಾಡಿನಲ್ಲಿ ನೆಲೆಸಿರುವ ಬೆಳ್ತಂಗಡಿಯ ಜನತೆಗೆ ಧೈರ್ಯ ತುಂಬಿದ್ದಾರೆ.
