Friday, June 26, 2026
Homeತಾಜಾ ಸುದ್ದಿಅಂತ್ಯಕ್ರಿಯೆಗೆಂದು ತೆರಳಿದ ಸಂದರ್ಭ ಹೆಚ್ಚೇನು ದಾಳಿ: ಓರ್ವ ವ್ಯಕ್ತಿ ಸಾವು

ಅಂತ್ಯಕ್ರಿಯೆಗೆಂದು ತೆರಳಿದ ಸಂದರ್ಭ ಹೆಚ್ಚೇನು ದಾಳಿ: ಓರ್ವ ವ್ಯಕ್ತಿ ಸಾವು

- Advertisement -
- Advertisement -

ಮಡಿಕೇರಿ: ಅನಾರೋಗ್ಯದಿಂದಾಗಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ತೆರಳಿದ ಸಂದರ್ಭ ಹೆಚ್ಚೇನು ದಾಳಿ ಮಾಡಿದ ಘಟನೆ ನಡೆದಿದ್ದು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅಬೂರುಕಟ್ಟೆ ಗ್ರಾ.ಪಂ ವ್ಯಾಪ್ತಿಯ ಹಳೇ ಮದಲಾಪುರ ಹಾಡಿಯಲ್ಲಿ ನಡೆದಿದೆ.

ಹಾಡಿಯ ನಿವಾಸಿ ಗೋವಿಂದ (48) ಮೃತ ದುರ್ದೈವಿ.


ಮೃತಪಟ್ಟಿದ್ದ ಹಾಡಿಯ ಕುಮಾರ ಎಂಬವರ ಅಂತ್ಯಕ್ರಿಯೆಗೆ ತೆರಳಿದ ಸಂದರ್ಭ ಹೆಚ್ಚೇನು ಹುಳುಗಳು ಸ್ಥಳದಲ್ಲೇ ಇದ್ದ ಗೋವಿಂದ ಎಂಬವರ ಮೇಲೆ ದಾಳಿ ನಡೆಸಿರುವುದರಿಂದ ಗೋವಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಂತ್ಯಕ್ರಿಯಲ್ಲಿ ಭಾಗಿಯಾಗಿದ್ದವರು ಹೆಚ್ಚೇನು ದಾಳಿ ಕಂಡು ಶವವನ್ನು ಸ್ಥಳದಲ್ಲೇ ಬಿಟ್ಟು ಪ್ರಾಣ ಉಳಿಸುವುದಕ್ಕಾಗಿ ಓಡಿದ್ದಾರೆ. ಆದರೆ ಹೆಚ್ಚೇನು ದಾಳಿಗೆ ಒಳಗಾಗಿ ಗಾಯಗೊಂಡ ಮುತ್ತಪ್ಪ, ಪಾರ್ವತಿ, ಅಣ್ಣಯ್ಯ, ಪರಣ್ಣಿ, ನಾಗಣ್ಣ, ಗೌಡ ಈ ಆರು ಮಂದಿಯನ್ನು ಕುಶಾಲನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!