Thursday, June 4, 2026
Homeಕರಾವಳಿಉಡುಪಿಹಿರಿಯಡ್ಕ: ಟಿಪ್ಪರ್-ಬೈಕ್ ನಡುವೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

ಹಿರಿಯಡ್ಕ: ಟಿಪ್ಪರ್-ಬೈಕ್ ನಡುವೆ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

- Advertisement -
- Advertisement -

ಹಿರಿಯಡ್ಕ: ಬಜೆಯಿಂದ ಜಲ್ಲಿ ಸಾಗಾಟ ಮಾಡುತ್ತಿದ್ದ ಟಿಪ್ಪರ್ ಹಾಗೂ ಕುಕ್ಕೆಹಳ್ಳಿಯಿಂದ ಹಿರಿಯಡ್ಕ ಕಡೆ ತೆರಳುತ್ತಿದ್ದ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಿರಿಯಡ್ಕ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ಎಂಬಲ್ಲಿ ಇಂದು ಸಂಭವಿಸಿದೆ.

ಮೃತ ಬೈಕ್ ಸವಾರ ಕೋಟೇಶ್ವರದ ಮೊಹಮ್ಮದ್ ಹನೀಫ್ (45) ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಚಾಲಕ ಟಿಪ್ಪರ್ ನ್ನು ಎರಡು ಕಿ.ಮೀ ದೂರದಲ್ಲಿ ರಸ್ತೆಬದಿ ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!