Monday, August 31, 2026
Homeತಾಜಾ ಸುದ್ದಿಕೋಮುವಾದಕ್ಕೆ ಸಾಮರಸ್ಯದ ಎದುರೇಟು: ಹಿಂದೂ ಮುಸ್ಲಿಮರಿಂದ ಬೃಹತ್ ತಿರಂಗ ಜಾಥಾ

ಕೋಮುವಾದಕ್ಕೆ ಸಾಮರಸ್ಯದ ಎದುರೇಟು: ಹಿಂದೂ ಮುಸ್ಲಿಮರಿಂದ ಬೃಹತ್ ತಿರಂಗ ಜಾಥಾ

- Advertisement -
- Advertisement -


ದೆಹಲಿ: ಕೋಮು ದ್ವೇಷದ ಜ್ವಾಲೆಯಿಂದ ಹೊತ್ತಿ ಉರಿದಿದ್ದ ದೆಹಲಿಯ ಜಹಾಂಗೀರ್ ಪುರ್ ಪ್ರದೇಶದಲ್ಲಿ ಭಾನುವಾರ ಭಾರತೀಯತೆ ನಳ ನಳಿಸಿತು. ಹಿಂದೂ ಮುಸ್ಲಿಂ ಸಮುದಾಯದ ಜನರು ನಾವೆಲ್ಲರೂ ಒಂದೇ ತಾಯಿಯ ಮಕ್ಕಳು ನಾವೆಲ್ಲರೂ ಭಾರತೀಯರು ಎಂದು ತಿರಂಗ ಧ್ವಜ ಹಿಡಿದು ಬೃಹತ್ ರ್ಯಾಲಿ ನಡೆಸಿದರು.ಈ ಮೂಲಕ ಕೋಮುವಾದಕ್ಕೆ ಎಚ್ಚರಿಕೆಯ ಸಂದೇಶ ಕೊಟ್ಟರು.


ಜಹಾಂಗೀರ್ ಪುರ್ ನ ಪ್ರತಿ ಮನೆಯಲ್ಲೂ ನಿನ್ನೆ ರಾಷ್ಟ್ರ ಧ್ವಜ ಹಾರಿಸಲಾಯಿತು.ಗಂಡಸರು ತಿರಂಗ ರ್ಯಾಲಿ ನಡೆಸಿದರೆ, ಮಹಿಳೆಯರು ಅವರ ಮೇಲೆ ಹೂವಿನ ಮಳೆಗೈದರು.ಸಂಜೆ 6 ಗಂಟೆಗೆ ಪ್ರಾರಂಭವಾದ ತಿರಂಗ ಯಾತ್ರೆಯು,ಶಾಂತಿಯ ಸಂದೇಶವನ್ನು ರವಾನಿಸುತ್ತಾ, ಕೋಮು ಸೌಹಾರ್ದತೆಯನ್ನು ಎತ್ತಿ ಹಿಡಿಯಿತು. ಇದೆ ನಿಜವಾದ ಭಾರತೀಯ ಮಣ್ಣಿನ ಅಸ್ಮಿತೆ ಎಂಬುವುದನ್ನು ಒತ್ತಿ ಹೇಳಿತು. ತಿರಂಗ ಹಿಡಿದ ಜನರು, “ಭಾರತ್ ಮಾತಾ ಕಿ ಜೈ, ಏಕ್ತಾ ಕಾ ರಾಜ್ ಚಲೇಗಾ, ಹಿಂದೂ ಮುಸ್ಲಿಂ ಸಾಥ್ ಚಲೇಗಾ’ ಎಂಬ ಘೋಷಣೆಗಳನ್ನು ಕೂಗಿ ಶಾಂತಿ ಮತ್ತು ಏಕತೆಯ ಸಂದೇಶ ಸಾರಿದರು.

- Advertisement -

Latest News

error: Content is protected !!