Thursday, June 4, 2026
HomeWorldಪ್ರಧಾನಿ ಮೋದಿಗೆ ಲತಾ ದೀನನಾಥ್ ಮಂಗೇಶರ್ ಪ್ರಶಸ್ತಿ

ಪ್ರಧಾನಿ ಮೋದಿಗೆ ಲತಾ ದೀನನಾಥ್ ಮಂಗೇಶರ್ ಪ್ರಶಸ್ತಿ

- Advertisement -
- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಮುಂಬೈನಲ್ಲಿ ಮೊದಲ ಲತಾ ದೀನನಾಥ್ ಮಂಗೇಶ್ವರ್ ಪ್ರಶಸ್ತಿಯನ್ನು ಸ್ವೀಕರಿಸಿದರು.ಮಾಸ್ಟರ್ ದೀನನಾಥ್ ಮಂಗೇಶರ್ ಸ್ಮೃತಿ ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಷ್ಟ್ರ ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆಗಾಗಿ ಪ್ರಧಾನಿ ಮೋದಿಯವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.


“ಭಾರತವನ್ನು ಜಾಗತಿಕ ನಾಯಕತ್ವದ ಹಾದಿಯಲ್ಲಿ ಇರಿಸಿರುವ ಅಂತಾರಾಷ್ಟ್ರೀಯ ರಾಜಕಾರಣಿ” ಎಂದು ಹೇಳಿಕೆಯೊಂದರಲ್ಲಿ ಮಾಸ್ಟರ್ ದೀನನಾಥ್ ಮಂಗೇಶ್ವರ್ ಟ್ರಸ್ಟ್ ಮೋದಿ ಅವರ ಕುರಿತು ಹೇಳಿದೆ. ಈ ವರ್ಷ ಫೆಬ್ರವರಿ 6 ರಂದು 92 ನೇ ವಯಸ್ಸಿನಲ್ಲಿ ನಿಧನರಾದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ವರ್ ಅವರ ಸ್ಮರಣಾರ್ಥ ಮತ್ತು ಗೌರವಾರ್ಥವಾಗಿ ಲತಾ ದೀನನಾಥ್ ಮಂಗೇಶ್ವರ್ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ.

- Advertisement -

Latest News

error: Content is protected !!